Advertisement

ಹ್ಯಾಂಡ್‌ ಮೇಡ್‌ ಸೋಪ್‌

04:46 AM May 25, 2020 | Lakshmi GovindaRaj |

ನಮ್ಮಲ್ಲಿ ವಿವಿಧ ಕಂಪನಿಗಳ, ವಿವಿಧ ಪರಿಮಳದ ಸೋಪುಗಳಿಗೆ ಬರವಿಲ್ಲ. ಅದರ ನಡುವೆಯೂ, ಮನೆಗಳಲ್ಲಿ ತಯಾರಾದ ಹ್ಯಾಂಡ್‌ಮೇಡ್‌ ಸೋಪುಗಳೂ ಮಾರುಕಟ್ಟೆಯನ್ನು ಕಂಡುಕೊಂಡಿವೆ. ಹೆಚ್ಚು ರಾಸಾಯನಿಕವಿಲ್ಲದ,  ಪ್ರಾಕೃತಿಕ ವಸ್ತುಗಳು, ಎಸೆನ್ಷಿಯಲ್‌ ಆಯಿಲ್‌ಗ‌ಳಿಂದ ಸಿದಪಡಿಸಿದ ಸೋಪುಗಳು, ಹಲವರನ್ನು ಆಕರ್ಷಿಸುತ್ತವೆ. ಇದು ಉದ್ಯೋಗ ಸೃಷ್ಟಿಗೂ ಕಾರಣವಾಗುವುದರಿಂದ, ಸರ್ಕಾರವೂ ಈ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುತ್ತದೆ.

Advertisement

ಮಾರುಕಟ್ಟೆಯಲ್ಲಿ   ದೊಡ್ಡ ಪ್ರಮಾಣದಲ್ಲಿ ತಯಾರಿಸಲ್ಪಡುವ ಸೋಪುಗಳಿಗೆ ಹೋಲಿಸಿದರೆ, ಹ್ಯಾಂಡ್‌  ಮೇಡ್‌ ಸೋಪುಗಳ ಬೆಲೆ ಹೆಚ್ಚು. ಆದರೂ ಅದನ್ನು ಕೊಳ್ಳುವ ಜನರು ಆ ಬಗ್ಗೆ ಚಿಂತಿಸುವುದಿಲ್ಲ. ಪರಿಸರಸ್ನೇಹಿಯೂ, ಆರೋಗ್ಯ ಸ್ನೇಹಿಯೂ ಆಗಿರುವ  ಹ್ಯಾಂಡ್‌ ಸೋಪ್‌ ಅನ್ನೇ ಅವರು ಇಷ್ಟಪಡುತ್ತಾರೆ. ಸೋಪು ಸೇರಿದಂತೆ ಕಾಸ್ಮೆಟಿಕ್‌ ಉತ್ಪನ್ನಗಳ ಅಡ್ಡಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿ, ಜನರು ಆಗ್ಯಾನಿಕ್‌ ಉತ್ಪನ್ನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಬಣ್ಣ, ಪರಿಮಳ, ಬಳಸಲ್ಪಡುವ ಪ್ರಾಕೃತಿಕ ಮೂಲವಸ್ತು ಗಳು… ಇವು, ಸೋಪು ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಹೆಚ್ಚಿನ ಮಾಹಿತಿಗೆ: tinyurl.com/yc2dd52h

Advertisement

Udayavani is now on Telegram. Click here to join our channel and stay updated with the latest news.

Next