Advertisement
ಹಣವಂತ-ಗುಣವಂತ, ಬಡವ- ಶ್ರೀಮಂತ, ಮತದಾರರ ಸಮಸ್ಯೆ ಗೊತ್ತಿದ್ದವರು-ಗೊತ್ತಿಲ್ಲದವರು, ನಾವು ಗೆದ್ದರೆ ಮತದಾರರ ಬಳಿಗೆ, ಅವರು ಗೆದ್ದರೆ ಮನೆ ಎದುರು ಕಾಯುವುದು, ಸ್ಥಳೀಯ ಮತದಾರರಿಗೆ ಸ್ಪಂದಿಸದಿರುವುದು, ನಾವು ಸ್ಪಂದಿಸುತ್ತೇವೆ. ಹೀಗೆ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಹಾಲಿ ಸದಸ್ಯ ಬಿ.ಜಿ.ಪಾಟೀಲ ಅಭ್ಯರ್ಥಿ ಎಂಬುದು ಮೊದಲೇ ಗೊತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಳೆದು-ತೂಗಿ ಎಲ್ಲವನ್ನು ವಿಚಾರಿಸಿ ಕೊನೆಗೆ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ಮಾಜಿ ನಾಯಕ ಶಿವಾನಂದ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಕಾಂಗ್ರೆಸ್ ಪಕ್ಷ ನಾಮಕಾವಾಸ್ತೆ ಸ್ಪರ್ಧಿಸಿದೆ ಎಂದಿತ್ತು. ಆದರೆ ಕಾಂಗ್ರೆಸ್ ಪಕ್ಷ ಕೆಳಹಂತದಿಂದ ಅದರಲ್ಲೂ ಸಂಘಟನಾತ್ಮಕವಾಗಿ ಪ್ರಚಾರಕ್ಕೆ ಇಳಿದಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.
Related Articles
Advertisement
ಚುನಾವಣೆ ಸಂದರ್ಭದಲ್ಲಿ ಪರಸ್ಪರ ಆರೋಪ ಹಾಗೂ ಟೀಕೆಗಳು ಕೇಳಿಬರುವುದು ಸಹಜ. ಅಭಿವೃದ್ಧಿ ಕೆಲಸಗಳು ಹಾಗೂ ಅನುದಾನ ಹಂಚಿಕೆ ಕುರಿತಾಗಿ ಬಹಿರಂಗ ಚರ್ಚೆಗೆ ಸಿದ್ಧ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಹಾಲಿ ಸದಸ್ಯ ಬಿ.ಜಿ. ಪಾಟೀಲ ಆಹ್ವಾನ ನೀಡಿದ್ದು, ಚುನಾವಣೆ ಅಖಾಡ ಮತ್ತಷ್ಟು ರಂಗೇರಿದೆ ಎನ್ನುವಂತಾಗಿದೆ.