Advertisement

ಕೈ, ಬಾಯಿ ಶುದ್ಧವಾಗಿರಲೇ ಬೇಕು: ನಾಗರತ್ನಾ ಶಾಸ್ತ್ರೀ

07:50 AM Aug 02, 2017 | Team Udayavani |

ಉಡುಪಿ: ಕೈ ಆಹಾರವನ್ನು ಮುಟ್ಟುವ ಮೊದಲು ಶುದ್ಧವಾಗಿರಬೇಕು. ಅದೇ ರೀತಿ ಆಹಾರ ಜಠರವನ್ನು ಪ್ರವೇಶಿಸುವ ಮುನ್ನ ಬಾಯಿಯೂ ಸ್ವತ್ಛವಾಗಿರಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ ಶಾಸ್ತ್ರೀ ಹೇಳಿದರು.
ಅವರು ಆ. 1ರಂದು ಉಡುಪಿ ಸರ್ವಿಸ್‌ ಬಸ್‌ಸ್ಟಾಂಡ್‌ ಬಳಿ ಇರುವ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ “ಪವರ್‌’ ಸಂಸ್ಥೆಯ ವತಿಯಿಂದ ಜರಗಿದ ಓರಲ್‌ ಹೈಜಿನ್‌ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಹೆಣ್ಣು ಹೆಣ್ಣನ್ನು ಹೆರುವಾಗ ಮಾತ್ರ ಹೆಣ್ಣು ಬೇಡವೆಂದು ಹೇಳುವುದು ವಿಪರ್ಯಾಸವೆಂದು ವಿಶ್ಲೇಷಿಸಿದ ಅವರು 0 ಇಂದ 6ರ ಒಳಗಿನ ಮಕ್ಕಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಇದರ ಪರಿಣಾಮ ಬೀರುತ್ತಿದೆ. ಹೆಣ್ಣುಮಗು ಬೇಡವೆಂದು ಹೇಳುವ ಸಾಮಾಜಿಕ ಪಿಡುಗು ಕೊನೆಗೊಳ್ಳಬೇಕೆಂದೂ ಅವರು ಹೇಳಿದರು.

ಇಂಡಿಯನ್‌ ಡೆಂಟಲ್‌ ಅಸೋಸಿ ಯೇಶನ್ನಿನ ಉಡುಪಿ ಶಾಖಾ ಅಧ್ಯಕ್ಷರಾದ ಡಾ| ವಿಜಯೇಂದ್ರ ವಸಂತ್‌ ರಾವ್‌ ಅಧ್ಯಕ್ಷತೆ ವಹಿಸಿ ಓರಲ್‌ ಹೈಜಿನ್‌ ಬಗ್ಗೆ ಮಾಹಿತಿ ನೀಡಿದರು.

“ಪವರ್‌’ ಅಧ್ಯಕ್ಷರಾದ ಡಾ| ಗಾಯತ್ರಿ, ಉಪಾಧ್ಯಕ್ಷರಾದ ತಾರಾ ತಿಮ್ಮಯ್ಯ ಉಪಸ್ಥಿತರಿದ್ದರು. ಮ.ಗ್ರಾ.ವಿ.ಸ.ಸಂಘದ ಅಧ್ಯಕ್ಷರಾದ ಜಯಲಕ್ಷ್ಮೀ ಭಂಡಾರಿ ಸ್ವಾಗತಿಸಿದರು. ಪವರ್‌ ಸದಸ್ಯರಾದ ರಾಜಲಕ್ಷ್ಮೀ ಶೆಟ್ಟಿ ವಂದಿಸಿದರು. ಯಶೋದಾ ಕೇಶವ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next