Advertisement

ವರಿಷ್ಠರ ನಿರ್ಧಾರಕ್ಕೆ ಬದ್ಧ: ನಿರಾಣಿ

05:48 PM Jul 31, 2021 | Team Udayavani |

ಕಲಾದಗಿ: ಮಾಜಿ ಸಚಿವ ಮುರುಗೇಶ ಆರ್‌. ನಿರಾಣಿ ಸಿಎಂ ಸ್ಥಾನದ ಅಪೇಕ್ಷಿತರಾಗಿದ್ದರು. ಆದರೆ, ದೇವರ ಅನುಗ್ರಹ ಇರದೇ ಕೈ ತಪ್ಪಿರಬಹುದು. ವರಿಷ್ಠರು ನಿರ್ಧಾರ ತೆಗೆದುಕೊಂಡು ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ನೀಡಿದ್ದಾರೆ. ಬೊಮ್ಮಾಯಿ ಅವರು ಸಹಿತ ಮುರುಗೇಶ ನಿರಾಣಿಯವರ ಆಪ್ತರು ಎಂದು ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಹೇಳಿದರು.

Advertisement

ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ತೆರೆದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್‌ ವಿತರಿಸಿ ಅವರು ಮಾತನಾಡಿದರು. ಮುಂದೆ ಮುರುಗೇಶ ನಿರಾಣಿಯವರಿಗೆ ಸಿಎಂ ಸ್ಥಾನದ ಅವಕಾಶ ಇದ್ದೇ ಇದೆ. ಬೊಮ್ಮಾಯಿ ಅವರು ಸಹಿತ ರಾಜಕೀಯ ಚಾಣಾಕ್ಷರು, ಒಳ್ಳೆಯ ಆಡಳಿತಗಾರರು. ಅವರ ತಂದೆಯವರ ಕಾಲದಿಂದಲೂ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದವರು. ಮುರುಗೇಶ ನಿರಾಣಿಯವರು ಸಿಎಂ ಆಯ್ಕೆಯಲ್ಲಿ ಟಾಪ್‌ ಮೂರರಲ್ಲಿದ್ದರು ಎಂದರು. ಡಿಸಿಎಂ ಆಕಾಂಕ್ಷಿ ಇಲ್ಲ. ಸರಕಾರ ಯಾವ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸಲ್ಲ ಚಾಕಚಕ್ಯತೆ ಮುರುಗೇಶ ನಿರಾಣಿಯವರಲ್ಲಿದೆ. ಜಗದೀಶ್‌ ಶೆಟ್ಟರ, ಸದಾನಂದಗೌಡ, ಯಡಿಯೂರಪ್ಪನವರು ಸೇರಿ ಎಲ್ಲರೂ ಬೀಳಗಿ ಮತಕ್ಷೇತ್ರದ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ನಮಗೆ ಸಹಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದರು.

ಹಕ್ಕು ಪತ್ರ ಸಿದ್ಧ: ಕಲಾದಗಿ ಮುಳುಗಡೆ ಸಂತ್ರಸ್ತರಿಗೆ ನಿವೇಶನದ ಹಕ್ಕು ಪತ್ರ ನೀಡಲು ಗ್ರಾಮಸ್ಥರಿಂದ ಬೇಡಿಕೆ ಬಂದ ಕಾರಣ, ಪುನರ್ವಸತಿ ಕೇಂದ್ರದಲ್ಲಿರುವ 3500 ನಿವೇಶನದ ಹಕ್ಕು ಪತ್ರ ವಿತರಣೆಗೆ ಸಿದ್ಧವಾಗಿದೆ. ಸಂತ್ರಸ್ತರು ಗ್ರಾಪಂನಲ್ಲಿ ಹಕ್ಕುಪತ್ರಕ್ಕಾಗಿ ಹೆಸರು ನೋಂದಾಯಿಸಲಿ, ಹಕ್ಕು ಪತ್ರ ತೆಗೆದುಕೊಳ್ಳಲು ಮುಂದೆ ಬಂದರೆ ಅವರೆಲ್ಲರಿಗೂ ಇದೇ ತಿಂಗಳು ಕೊನೆಯಲ್ಲಿ ನೀಡುವುದಾಗಿ ಹೇಳಿದರು.

ಪುನರ್ವಸತಿ ಕೇಂದ್ರಕ್ಕೆ ಹೆಚ್ಚುವರಿ 200 ಎಕರೆ ಬೇಕಾಗಬಹುದು, ಹೆಚ್ಚುವರಿ ಭೂಮಿಯನ್ನು ಭೂಸ್ವಾ ಧೀನ ಪಡಿಸಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು. ಈ ಕುರಿತು ಮುರುಗೇಶ ನಿರಾಣಿಯವರು ಸಹಿತ ಆಯುಕ್ತರೊಂದಿಗೆ ಮಾತನಾಡಿ ಸೂಕ್ತ ಕ್ರಮ ವಹಿಸಲು ಮುಂದಾಗಿದ್ದಾರೆ. ಹಕ್ಕು ಪತ್ರ ತೆಗೆದುಕೊಳ್ಳಲು ಯಾರಿಗೂ ಒತ್ತಾಯ ಇಲ್ಲ, ಯಾರು ಸ್ವಇಚ್ಛೆಯಿಂದ ಹಕ್ಕುಪತ್ರ ಪಡೆಯಲು ಮುಂದಾಗುತ್ತಾರೋ ಅವರಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.,

Advertisement

Udayavani is now on Telegram. Click here to join our channel and stay updated with the latest news.

Next