Advertisement

ಹುಣಸೂರು: ಹನಗೋಡು ಗ್ರಾ.ಪಂ. ಅಧ್ಯಕ್ಷರಾಗಿ ಜಯಲಕ್ಷ್ಮೀ ಅವಿರೋಧ ಆಯ್ಕೆ

02:17 PM Aug 21, 2022 | Team Udayavani |

ಹುಣಸೂರು: ತಾಲೂಕಿನ ಹನಗೋಡು ಗ್ರಾಮ ಪಂಚಾಯತ್ ನ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಯಲಕ್ಷ್ಮೀ (ಹಿಂದುಳಿದ ವರ್ಗ ಎ, ಮಹಿಳೆ) ಅವಿರೋಧವಾಗಿ ಆಯ್ಕೆಯಾದರು.

Advertisement

ಹಿಂದಿನ ಅಧ್ಯಕ್ಷೆ ನೂರ್ ಜಹಾನ್‌ರ ವಿರುದ್ದ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯತಗೊಳಿಸಿದ್ದರಿಂದ ಚುನಾವಣೆ ನಿಗದಿಯಾಗಿತ್ತು. ಜಯಲಕ್ಷ್ಮೀ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಗ್ರಾ.ಪಂ. 13 ಸದಸ್ಯರ ಪೈಕಿ ಮಾಜಿ ಅಧ್ಯಕ್ಷೆ ನೂರ್ ಜಹಾನ್ ಹೊರತು ಪಡೆಸಿ ಉಳಿದ 12 ಮಂದಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅವಿರೋಧ ಆಯ್ಕೆ ನಂತರ ಪಂಚಾಯತಿಯ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷ ಬೋರೇಗೌಡ, ಸದಸ್ಯರಾದ ಸಂತೋಷ್,  ಮಹದೇವ್, ಶಿವಣ್ಣ, ರತ್ನ ಶ್ರೀಧರ್, ಛಾಯಾ, ಚನ್ನಯ್ಯ, ಸದಸ್ಯರು, ಕಾಂಗ್ರೆಸ್ ಮುಖಂಡ ಪಾಪಣ್ಣ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next