ಶಿವಮೊಗ್ಗ : ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನೀಡಲು ಬಂದ ಭಕ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಕ್ಷೇತ್ರದಲ್ಲಿ ನಡೆದಿದೆ.
ಹಣಗೆರೆಕಟ್ಟೆಯಲ್ಲಿರುವ ಶ್ರೀ ಚೌಡೇಶ್ವರಿ ಭೂತರಾಯ ಹಾಗೂ ಸೈಯದ್ ಸಾದತ್ ದರ್ಗಾ ಇರುವ ಧಾರ್ಮಿಕ ಕ್ಷೇತ್ರದಲ್ಲಿ ಆದೇಶ ಉಲ್ಲಂಘನೆಯಾಗಿದ್ದು ಈ ಹಿಂದೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರದಲ್ಲಿ ಕುರಿ – ಕೋಳಿ ಬಲಿ ಕೊಡುವುದನ್ನು ತಹಶೀಲ್ದಾರ್ ನಿಷೇಧ ಮಾಡಿದ್ದರು.
ಇದೀಗ ತಹಶೀಲ್ದಾರ್ ಆದೇಶ ಉಲ್ಲಂಘನೆ ಮಾಡಿ ಭಕ್ತರು ಪ್ರಾಣಿ ಬಲಿ ನೀಡುತ್ತಿದ್ದಾರೆ ಇದರಿಂದ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಪ್ರಾಣಿ ಬಲಿ ಕೊಡಲು ಬರುತ್ತಿರುವ ಭಕ್ತರ ವಾಹನಗಳನ್ನು ತಡೆದು ವಾಪಸು ಕಳುಹಿಸಿದ್ದಾರೆ.
ಇದನ್ನೂ ಓದಿ :ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಹಣಗೆರೆಕಟ್ಟೆ ಕ್ಷೇತ್ರದ 2 ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿ ಈ ರೀತಿಯ ಕೆಲಸ ಮಾಡಲಾಗುತ್ತಿದೆ, ಪ್ರಾಣಿ ಬಲಿ ನೀಡುವವರು ಹಣೆಗೆರೆಕಟ್ಟೆ, ಕೆರೆಹಳ್ಳಿಯ ಅರಣ್ಯ ದೊಳಗೆ ಅಡುಗೆ ಮಾಡುತ್ತಿದ್ದಾರೆ ಇದರಿಂದ ಸ್ಥಳೀಯ ಪರಿಸರ ಹಾಳಾಗುತ್ತಿದೆ ಹಾಗಾಗಿ ಹರಕೆ ತೀರಿಸಿ, ಅರಣ್ಯದೊಳಗೆ ಅಡುಗೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲು ಸ್ಥಳೀಯರ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಆದೇಶ ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸಲು ಹಣಗೆರೆಕಟ್ಟೆ – ಕೆರೆಹಳ್ಳಿ ಗ್ರಾಮಸ್ಥರ ಒತ್ತಾಯ.