ಹಾನಗಲ್ಲ: ಕಾಮನ ಹಬ್ಬ ಬಂತೆಂದರೆ ಒಂದು ಹೊಸ ವೇಷದ ಮೂಲಕ ಇಡೀ ಹಾನಗಲ್ಲಿನಲ್ಲಿ ಸುತ್ತಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಜನಪದ ಕಲಾವಿದ ರವಿ ಲಕ್ಷ್ಮೇಶ್ವರ ಈ ಬಾರಿ ಕಾಲಜ್ಞಾನಿ ಬಾಲಬಸವಣ್ಣನ ವೇಷದಲ್ಲಿ ನೀರು ಮತದಾನದ ಕುರಿತು ಜಾಗೃತಿ ಸಂದೇಶ ನೀಡಿ ಹಬ್ಬಕ್ಕೆ ಮೆರಗು ತಂದಿದ್ದಾರೆ.
Advertisement
ನಾಲ್ಕನೇ ತರಗತಿಯಿಂದಲೇ ಹಾಡು, ನಾಟಕ, ವೇಷಭೂಷಣ ಸ್ಪರ್ಧೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರಾದ ಇವರು, ನಾಟಕಕಲಾವಿದರೂ ಹೌದು. ಕಂಪನಿ ನಾಟಕದಲ್ಲೂ ಪಾತ್ರ ಮಾಡಿದ್ದಾರೆ. ಅಣ್ಣ ತಂಗಿ, ಮೂವರು ಮೂರ್ಖರು, ಸಿಂಧೂರ ಲಕ್ಷ ¾ಣ, ಗಡಿ ದುರ್ಗವ್ವ, ಹೆಂಡತಿಯೇ ನಿನಗೆ ನಮೋ ಸೇರಿದಂತೆ 20ಕ್ಕೂ ಅಧಿಕ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.
ಲಕ್ಷ ¾ಣ ಸೀತಾ ಹನುಮಂತ, ರಾವಣ, ಯಮಧರ್ಮ, ಕಾಲಭೆ„ರವ, ಮಂತ್ರವಾದಿ, ಶಿವ, ದುರಗಮುರುಗಿ, ಶರೀಫ ಶಿವಯೋಗಿ,
ಕನಕದಾಸ, ಹುಲಿ, ಪವಾಡ ಪುರುಷ ಸಿದ್ದಪ್ಪಾಜಿ ವೇಷದ ಮೂಲಕ ಆಯಾ ಕಾಲಕ್ಕೆ ಬೇಕಾಗುವ ಜಾಗೃತಿ ಸಂದೇಶಗಳನ್ನು ಸಾರುತ್ತ ಬಂದಿದ್ದಾರೆ. ಹತ್ತು ವರ್ಷಗಳಿಂದ ಇಂಥ ವೇಷಭೂಷಣಕ್ಕೆ ಮುಂದಾಗಿದ್ದಾರೆ. ಚಿಕ್ಕಂದಿನಲ್ಲಿ ಹಿರಿಯರು ಹಾಕುತ್ತಿದ್ದ ವೇಷಭೂಷಣಗಳನ್ನು ನೋಡುತ್ತ ನನಗೂ ಮಾಡುವ ಹಂಬಲ. ಕಿತ್ತೂರ ಯಲ್ಲಪ್ಪನವರು, ಶಂಕರಪ್ಪ ಕೊಲ್ಲಾಪೂರ, ರೇವಡಿಗಾರ ಬಾಬು, ವಾಮನರಾವ ಏಸಕ್ಕನವರ, ಕಬ್ಬೂರ ಕರಿಯಪ್ಪ
ಮೊದಲಾದವರ ಹಾಕುತ್ತಿದ್ದ ವೇಷಭೂಷಣ ನನಗೆ ಸ್ಫೂರ್ತಿ ಎನ್ನುತ್ತಾರೆ ರವಿ.
Related Articles
Advertisement
ಚಿಕ್ಕಂದಿನಿಂದಲೂ ವೇಷಭೂಷಣ ಹಾಕುವ ಖಯಾಲಿ ನನ್ನದು. ಓಕಳಿ ಸಂದರ್ಭದಲ್ಲಿ ಒಂದೊಂದು ವಿಶೇಷ ವೇಷ ಧರಿಸಿ ಆಯಾ ಸಮಯಕ್ಕೆ ಬೇಕಾದ ಸಂದೇಶ ಹೇಳುತ್ತ ತಿರುಗಾಡುವುದು ಒಂದು ಜಾಗೃತಿಯಾದರೆ, ಇನ್ನೊಂದು ವೇಷ ಹಾಕು ಹಂಬಲಪೂರೈಸಿಕೊಳ್ಳುವುದು. ಪ್ರತಿ ಬಾರಿ ಮುಂದಿನ ವರ್ಷ ಯಾವ ವೇಷ ಎಂದು ಕೇಳುತ್ತಾರೆ. ಕಾಮನಹಬ್ಬ ಸಮೀಪಿಸಿದಾಗ ಈ ವರ್ಷ ಯಾವ ವೇಷ ಎಂದು ಹುಡುಗರು, ಹಿರಿಯರು ಕೇಳುತ್ತಾರೆ. ಇದರಲ್ಲಿ ಖುಷಿ ಇದೆ.
ರವಿ ಲಕ್ಷ್ಮೇಶ್ವರ, ಜಾನಪದ ಕಲಾವಿದ, ಕಾಲಜ್ಞಾನಿ ಬಾಲಬಸವಣ್ಣನ ವೇಷಧಾರಿ