Advertisement
ಹಾನಗಲ್: ಶೇ.83.44 ಮತದಾನಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.44 ರಷ್ಟು ಮತದಾನವಾಗಿದೆ.ಬೆಳಗ್ಗೆ ಏಳು ಗಂಟೆಗೆ ನೀರಸವಾಗಿ ಆರಂಭಗೊಂಡ ಮತದಾನ ಪ್ರಕ್ರಿಯೆ 11 ಗಂಟೆ ಬಳಿಕ ಬಿರುಸು ಪಡೆದುಕೊಂಡಿತು.
ಹಾನಗಲ್ ಕ್ಷೇತ್ರದಲ್ಲಿ 239 ಮೂಲ ಹಾಗೂ 24 ಹೆಚ್ಚುವರಿ ಸೇರಿ ಒಟ್ಟು 263 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಈ ಪೈಕಿ ಸೂಕ್ಷ ¾ ಮತಗಟ್ಟೆಗಳೆಂದು ಗುರುತಿಸಲಾಗಿದ್ದ 33 ಕಡೆ ವಿಶೇಷ ಭದ್ರತೆ ಒದಗಿಸಲಾಗಿತ್ತು.
Related Articles
Advertisement
ಇದನ್ನೂ ಓದಿ:80 ಸಾವಿರ ಫಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್
ಸಿಂದಗಿ: ಶೇ. 68.12 ಮತದಾನಸಿಂದಗಿ: ಸಿಂದಗಿಯಲ್ಲಿ ಶೇ.68.12 ಮತದಾನವಾಗಿದೆ. ಕೆಲವೆಡೆ ಮತಯಂತ್ರಗಳ ತಾಂತ್ರಿಕದೋಷ ಕಂಡು ಬಂದ ಹಿನ್ನೆಲೆ ಚುನಾವಣಾಧಿ ಕಾರಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸಿದ್ದಾರೆ. ಮತದಾನ ಆರಂಭಕ್ಕೆ ಮುನ್ನವೇ ಆಲಮೇಲ ಪಟ್ಟಣದ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಸಂಬಂಧಿ ಪದ್ಮಾವತಿ ಎಂಬವರು ಮತಗಟ್ಟೆ ಕೇಂದ್ರದ ಬಾಗಿಲು ಹಾಗೂ ಹೊಸ್ತಿಲಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಸ್ಥಳೀಯ ಮುಸ್ಲಿಂ ಮಹಿಳೆಯರು ಸಾಥ್ ನೀಡಿದರು. ಅಭ್ಯರ್ಥಿಗಳ ಮತದಾನ
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರು ಪತ್ನಿ ನಾಗರತ್ನಾ ಜತೆ ಮಲಘಾಣ ಗ್ರಾಮದಲ್ಲಿ, ಬಿಜೆಪಿಯ ರಮೇಶ ಭೂಸನೂರ ಅವರು ಆಲಮೇಲದಲ್ಲಿ ಹಾಗೂ ಜೆಡಿಎಸ್‌ನ ನಾಜಿಯಾ ಅಂಗಡಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಗಣಿಹಾರ ಗ್ರಾಮದಲ್ಲಿ ಮತ ಚಲಾಯಿಸಿದರು. ಸಿಂದಗಿ ಕ್ಷೇತ್ರದ ತಾಂಬಾ ಗ್ರಾಮದ ಮತಗಟ್ಟೆಯಲ್ಲಿ ನಾಗಠಾಣ ಶಾಸಕ ದೇವಾನಂದ ಚೌವಾಣ್ ಅವರು ಪತ್ನಿ ಅನಿತಾ ಜತೆ ಆಗಮಿಸಿ ಮತದಾನ ಮಾಡಿದರು. ಕೈಕೊಟ್ಟ ಮತಯಂತ್ರಗಳು
ಸಿಂದಗಿ ಪಟ್ಟಣದ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ 172 ಹಾಗೂ ತಾಂಬಾದ ಮತಗಟ್ಟೆ ಸಂಖ್ಯೆ 92ರಲ್ಲಿ ಮತ ಯಂತ್ರದಲ್ಲಿ ಸಮಸ್ಯೆ ಕಂಡು ಬಂದಿತ್ತು. ಮತದಾನದ ವೀಡಿಯೋ, ಫೋಟೋ ವೈರಲ್
ಸಿಂದಗಿ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯ ವೀಡಿಯೋ ಹಾಗೂ ಫೋಟೋ ತೆಗೆದು ವೈರಲ್ ಮಾಡಿದ ಆರೋಪದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಓರ್ವ ಜೆಡಿಎಸ್ ಅಭ್ಯರ್ಥಿ ಪರ ಮತದಾನ ಮಾಡಿದ್ದ ವೀಡಿಯೋವನ್ನು ಹಾಗೂ ಮತ್ತೂಬ್ಬ ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡಿದ್ದ ಫೋಟೋವನ್ನು ವೈರಲ್ ಮಾಡಿದ್ದರು. ವೀಡಿಯೋ ಮಾಡಿರುವ ಪ್ರಕರಣ ಮತಗಟ್ಟೆ ಸಂಖ್ಯೆ 135ರದ್ದೆಂಬುದನ್ನು ಜಿಲ್ಲಾಡಳಿತ ಪತ್ತೆ ಮಾಡಿದ್ದು, ಅದರ ಆರೋಪಿತನನ್ನು ಬಂಧಿ ಸಿರುವುದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.