ಮೈಸೂರು: ಚಿತ್ರ ಸಾಹಿತಿ- ಸಂಗೀತ ನಿರ್ದೇಶಕ ಹಂಸಲೇಖಾ ಅವರು ಈ ಬಾರಿ ದಸರಾ ಉದ್ಘಾಟನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜತೆಗಿದ್ದರು.
ಇದೇ ವೇಳೆ ಸಿಎಂ, ಡಿಸಿಎಂ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚಾಮುಂಡಿ ದೇವಿಯ ಮುಂಭಾಗದಲ್ಲಿ ಈಡುಗಾಯಿ ಹರಕೆ ತೀರಿಸಿದರು. ಚಾಮುಂಡಿ ಬೆಟ್ಟದ ಮುಂಭಾಗದ ಗೋಪುರದ ಮುಂದೆ ಈಡುಗಾಯಿ ಒಡೆದರು. ಡಿಸಿಎಂ ಡಿಕೆ ಶಿವಕುಮಾರ್ ಅವರು ಎರಡು ಈಡುಗಾಯಿ ಒಡೆದರು.
ಇದನ್ನೂ ಓದಿ:Jailer: ಆರ್‌ಸಿಬಿ – ಜೈಲರ್ ಜೆರ್ಸಿ ವಿವಾದ; ಕೋರ್ಟ್ ಆದೇಶಕ್ಕೆ ತಲೆಬಾಗಿದ ನಿರ್ಮಾಪಕರು
ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಸಂಬಂಧ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷಗಳು ಎಷ್ಟು ನಮ್ಮನ್ನ ದೂರ ಮಾಡಲು ಯತ್ನ ಮಾಡಿತ್ತಿದ್ಧಾರೋ ಅಷ್ಟು ನಾವಿಬ್ಬರು ಹತ್ತಿರವಾಗುತ್ತಿದ್ದೇವೆ ಎಂದರು.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ವಿರೋಧ ಪಕ್ಷಗಳು ನಮ್ಮಿಬ್ಬರ ಸಂಬಂಧ ವಿಚಾರದ ಬಗ್ಗೆ ಮಾತನಾಡುತ್ತಲೇ ಇರಲಿ. ನಾವು ಮಾತ್ರ ಸದಾ ಒಟ್ಟಾಗಿರುವುದನ್ನ ನೀವು ನೋಡುತ್ತಿರುತ್ತೀರಿ ಎಂದರು.