ಹುಬ್ಬಳ್ಳಿ: ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಅಗರ್ತಲಾ-ಬೆಂಗಳೂರು ಕಂಟೋನ್ಮೆಂಟ್ ಹಮ್‌ಸಫರ್ ಎಕ್ಸ್‌ಪ್ರೆಸ್ (12504/12503) ರೈಲನ್ನು ಮೇ 29ರಿಂದ ವಾರಕ್ಕೆರಡು ಬಾರಿ ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಬೆಂಗಳೂರು ಕಂಟೋನ್ಮೆಂಟ್‌ನಿಂದ ಶುಕ್ರವಾರ ಹಾಗೂ ಮಂಗಳವಾರ ಬೆಳಗ್ಗೆ 10:15ಕ್ಕೆ ಹೊರಡುವ ರೈಲು ಕ್ರಮವಾಗಿ ಸೋಮವಾರ ಹಾಗೂ ಶುಕ್ರವಾರ ನಸುಕಿನಲ್ಲಿ 3:45ಕ್ಕೆ ಅಗರ್ತಲಾ ತಲುಪಲಿದೆ.
ಅದೇ ರೀತಿ, ಅಗರ್ತಲಾದಿಂದ ಪ್ರತಿ ಮಂಗಳವಾರ ಹಾಗೂ ಶನಿವಾರ ನಸುಕಿನಲ್ಲಿ 5 ಗಂಟೆಗೆ ಹೊರಡುವ ರೈಲು ಕ್ರಮವಾಗಿ ಗುರುವಾರ ಹಾಗೂ ಸೋಮವಾರ ರಾತ್ರಿ 11:15ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ಬಂದು ಸೇರಲಿದೆ.
ರೈಲು ಸೇವೆ ಮುಂದುವರಿಕೆ: ಈ ಮಧ್ಯೆ, ನೈರುತ್ಯ ರೈಲ್ವೆ, ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಜೂನ್ 1ರಿಂದ ಜುಲೈ 29 ಜುಲೈವರೆಗೆ ಯಶವಂತಪುರ-ವಿಶಾಖಪಟ್ಟಣಂ ವಾರದ ಎಕ್ಸ್‌ಪ್ರೆಸ್ ತತ್ಕಾಲ್ ಎಕ್ಸ್‌ಪ್ರೆಸ್ ಸ್ಪೇಷಲ್ (06579/06580) ರೈಲು ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ.
ರೈಲು ಯಶವಂತಪುರದಿಂದ ಪ್ರತಿ ಶುಕ್ರವಾರ ಸಂಜೆ 6:35ಕ್ಕೆ ಪ್ರಯಾಣ ಬೆಳೆಸಿ ಶನಿವಾರ ಮಧ್ಯಾಹ್ನ 2:35ಕ್ಕೆ ವಿಶಾಖಪಟ್ಟಣಂಗೆ ಬಂದು ಸೇರಲಿದೆ. ಅದೇ ರೀತಿ, ವಿಶಾಖಪಟ್ಟಣಂನಿಂದ ಪ್ರತಿ ಭಾನುವಾರ ಮಧ್ಯಾಹ್ನ 1:45ಕ್ಕೆ ಹೊರಡುವ ರೈಲು ಯಶವಂತಪುರಕ್ಕೆ ಸೋಮವಾರ ಬೆಳಗ್ಗೆ 9:05ಕ್ಕೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.