ಹೊಸಪೇಟೆ : ವೀಕೆಂಡ್ ಹಿನ್ನಲೆಯಲ್ಲಿ ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಸಹಸ್ರಾರು ಭಕ್ತರು, ಶನಿವಾರ ಭೇಟಿ ನೀಡಿ, ವಿರೂಪಾಕ್ಷೇಶ್ವರ – ಪಂಪಾದೇವಿ ದರ್ಶನ ಪಡೆದರು.
ಶನಿವಾರದ ಪೂಜೆಗಾಗಿ ಆನೆಗುಂದಿಯಲ್ಲಿ ಆಂಜನಾರ್ದಿ ಪರ್ವತಕ್ಕೆ ಭೇಟಿ ನೀಡಿ, ಆಂಜನೇಯ ದರ್ಶನ ಪಡೆದ ಬಳಿಕ ವಿರೂಪಾಕ್ಷೇಶ್ವರ ದರ್ಶನ ಪಡೆದ ಭಕ್ತರು, ಹೂ-ಹಣ್ಣು- ಕಾಣಿಕೆ ಸಲ್ಲಿಸಿ, ಭಕ್ತಿ ಮೆರೆದರು.
ಹೇಮಕೂಟ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಉಗ್ರ ನರಸಿಂಹ, ಬಡವಿಲಿಂಗ, ಉದ್ದಾನವೀರಭದ್ರ, ಭೂಮಿ ಮಟ್ಟದ ಶಿವಾಲಯ, ಅಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ಕಮಲ ಮಹಲ್, ವಿಜಯವಿಠಲ ದೇವಾಲಯ ಸೇರಿದಂತೆ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದ ಬಸ್, ಕಾರು, ದ್ವಿಚಕ್ರ ವಾಹನದ ಮೂಲಕ ಹಂಪಿಗೆ ಆಗಮಿಸಿದ್ದರು. ಇತ್ತೀಚಿಗೆ ಹೆಚ್ಚಾಗಿ ಆಂಜನಾದ್ರಿ ಪರ್ವತಕ್ಕೆ ಭೇಟಿ ನೀಡುವ ಹನುಮ ಭಕ್ತರು, ಹಂಪಿಗೆ ಆಗಮಿಸಿ, ವಿರೂಪಾಕ್ಷನ ದರ್ಶನ ಪಡೆಯುವುದು ವಾಡಿಕೆಯಾಗಿದೆ. ಅದರಲ್ಲಿ ಪ್ರತಿ ಶನಿವಾರ ಹನುಮನ ದರ್ಶನ ಪಡೆಯಲು ಆಗಮಿಸುವ ಭಕ್ತರು ಹಂಪಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : ಕೊರಟಗೆರೆ: ಬಸ್ ಸ್ಟ್ಯಾಂಡ್ ಆಯಿತು ಮಾರುಕಟ್ಟೆ; ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ