Advertisement

ಹಂಪಿ ಶುಗರ್ಸ್ಗ್ ಗೆ ನೀಡಿದ್ದ ಭೂ ಮಂಜೂರಾತಿ ಆದೇಶ ಸ್ಥಗಿತಕ್ಕೆ ಶಾಸಕರಿಂದ ಪತ್ರ

10:13 AM Aug 02, 2023 | Team Udayavani |

ಹೊಸಪೇಟೆ: ಇಲ್ಲಿನ ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಮಾಜಿ ಸಚಿವ ಆನಂದ ಸಿಂಗ್, ನಗರದ ಜಂಬುನಾಥಹಳ್ಳಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಹಂಪಿ ಶುಗರ್ಸ್ ಕಂಪನಿಗೆ ಸರ್ಕಾರದಿಂದ 81.86 ಭೂಮಿಗೆ ಹೊರಡಿಸಿದ್ದ ಮಂಜೂರಾತಿ ಆದೇಶವನ್ನು ರದ್ದುಗೊಳಿಸುವಂತೆ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಈ ಭೂಮಿಯನ್ನು ನಗರದ ವಸತಿ ರಹಿತ ಬಡವರಿಗೆ ಮೀಸಲಿಡಬೇಕು ಎಂದು ಕೋರಿದ್ದಾರೆ.

Advertisement

ನಗರದ ಜಂಬುನಾಥ ಹಳ್ಳಿ ವ್ಯಾಪ್ತಿಯ ಸರ್ವೆ ನಂಬರ್ 11/1 ಇತರೆ ಸರ್ವೆ ನಂಬರ್‌ಗಳ ಒಟ್ಟು 81.86 ಎಕರೆ ಭೂಮಿಯಲ್ಲಿ ಎಥೆನಾಲ್ ಕಾರ್ಖಾನೆ ಸ್ಥಾಪನೆಗಾಗಿ ಮೆ.ಹಂಪಿ ಶುಗರ್ಸ್ ಕಂಪನಿಗೆ ಸರ್ಕಾರ ಹೊರಡಿಸಿರುವ ಭೂ ಮಂಜೂರಾತಿ ಆದೇಶ ಸ್ಥಗಿತಗೊಳಿಸುವಂತೆ ಕಳೆದ ಜುಲೈ 17 ರಂದು ಪತ್ರ ಬರೆದಿದ್ದಾರೆ.

ಸರ್ಕಾರಕ್ಕೆ ನಷ್ಟ:
ಜಂಬುಗನಾಥಹಳ್ಳಿ ಗ್ರಾಮದ ಜಮೀನು ಭೂ ಭಾಗವು ಹೊಸಪೇಟೆ ನಗರಸಭೆಗೆ ಸೇರಲಿದೆ. ಈ ಜಮೀನಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ. ಪ್ರತಿ ಎಕರೆ ಸುಮಾರು 2 ಕೋಟಿ ರೂ ಬೆಲೆಯಷ್ಟು ಬೆಲೆ ಬಾಳಲಿದೆ. ಬರಿ ಮಾರ್ಗಸೂಚಿ ದರದಲ್ಲಿ ಭೂ ಪರಿವರ್ತನ ಶುಲ್ಕವನ್ನು ಕೂಡ ಪವತಿಸಿಕೊಳದೇ ತರಾತುರಿಯಲ್ಲಿ 84,86 ಎಕರೆ ಜಮೀನುನನ್ನು ಕೇವಲ 13 ರಿಂದ 14 ಕೋಟಿ ರೂ.ಗಳಿಗೆ ಖಾಸಗಿ ಕಂಪನಿಯೊಂದಕ್ಕೆ ಮಾರಾಟ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಲಿದೆ. ಸುಮಾರು 150 ಕೋಟಿ ರೂ.ಗಳಷ್ಟು ಸರ್ಕಾರಕ್ಕೆ ನಷ್ಟವಾಗಲಿದೆ. ನಗರ ವ್ಯಾಪ್ತಿಯ ವಸತಿ ರಹಿತ ಬಡಜನರಿಗೆ ಈ ಭೂಮಿ ಕಾಯ್ದಿರುವಂತೆ ಮನವಿ ಮಾಡಿದ್ದಾರೆ.

ರೈತರ ಸಂಕಷ್ಟ:
ಭಾಗದ ಕಬ್ಬು ಬೆಳೆಗಾಗರರಿಗೆ ಆಸರೆಯಾಗಿದ್ದ ನಗರದ ಚಿತ್ತವಾಡ್ಗಿಯ ಐಎಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಿ ಆರೇಳು ವರ್ಷ. ಸಣ್ಣ, ಅತಿ ಸಣ್ಣ ರೈತರು ಈ ಕಾರ್ಖಾನೆ ಮೇಲೆ ಅವಲಂಬಿತರಾಗಿದ್ದರು. ಕಾರ್ಖಾನೆ ಅಚ್ಚುಕಟ್ಟು ಪ್ರದೇಶದ ರೈತರು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ಸಾಗಿಸುತ್ತಿದ್ದರು. ಆರಂಭದಿಂದಲೂ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಕಾರ್ಖಾನೆ ಆಡಳತ ಮಂಡಳಿ, ಕಾಲ ಕಳೆದಂತೆ ರೈತರಿಗೆ ಕಬ್ಬಿನ ಹಣ ಪಾವತಿಯನ್ನು ವಿಳಂಬ ಮಾಡಿ, ಬಾಕಿ ಉಳಿಸಿಕೊಂಡಿತು. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಯಿತು. ಕೊನೆಗೆ ರೈತರ ತಾಳ್ಮೆಯ ಕಟ್ಟೆ ಹೊಡೆಯಿತು.

ರೈತರಿಂದ ಧರಣಿ:
ರೈತರ ಬಾಕಿ ಹಣ ಪಾವತಿಗಾಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಹಲವು ಧರಣಿ ನಡೆಸಿ, ಆಕ್ರೋಶ ಹೊರ ಹಾಕಿದರು. ಆದರೂ ಕಾರ್ಖಾನೆಯಿಂದ ಬಾಕಿ ಹಣ ಬರಲ್ಲಿಲ್ಲ. ಅನಿವಾರ‍್ಯವಾಗಿ ಅಂದಿನ ಶಾಸಕರಾಗಿದ್ದ ಮಾಜಿ ಸಚಿವ ಆನಂದ ಸಿಂಗ್ ಅವರ ಮೊರೆ ಹೋದರು. ಆಗ ರೈತರ ಮನವಿಗೆ ಸ್ಪಂದಿಸಿದ ಆನಂದ ಸಿಂಗ್ ಅವರು, ಕಾರ್ಖಾನೆ ಮಾಲೀಕರನ್ನು ಚೆರ್ಚಿಸಿ ರೈತರ ಬಾಕಿ ಹಣ ನೀಡುವಂತೆ ಮನವಿ ಮಾಡಿದರು. ರೈತರೊಂದಿಗೆ ಪ್ರತಿಭಟನೆ ಕೂಡ ನಡೆಸಿದರು. ಇದ್ಯಾವುದಕ್ಕೂ ಜಗ್ಗದ ಕಾರ್ಖಾನೆ ಮಾಲೀಕರು, ಕಾರ್ಖಾನೆ ಸ್ಥಗಿತಗೊಳಿಸಿದರು. ಕಾರ್ಖಾನೆ ಆಡಳಿತ ಮಂಡಳಿಯ ಹಠಮಾರಿ ಧೋರಣೆಗೆ ಈ ಭಾಗದ ಜನರಿಗೆ ವರದಾನವಾಗಿದ್ದ ಸಕ್ಕರೆ ಕಾರ್ಖಾನೆ ಇದ್ದು ಇಲ್ಲದಾಗಿ ಪರದಾಡುತ್ತಿದ್ದಾರೆ.

Advertisement

ರಾಜಕೀಯ ಬಣ್ಣ:
ಕಾರ್ಖಾನೆಯ ಅನತಿ ದೂರದಲ್ಲಿ ಆನಂದ ಸಿಂಗ್ ಅವರ ಭವ್ಯ (ನಿವಾಸ) ಅರಮನೆ ಇದೆ. ಅವರ ಅರಮನೆಗೆ ಕಾರ್ಖಾನೆ ಕಬ್ಬು ಬೂದಿ ಗಾಳಿಯಲ್ಲಿ ಬಂದು ಭವ್ಯ ಬಂಗಲೆ ಸೇರಬಹುದು ಎಂಬ ಕಾರಣದಿಂದಲೇ ಆನಂದ ಸಿಂಗ್, ಸಕ್ಕರೆ ಕಾರ್ಖಾನೆ ಸ್ಥಗಿತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಆರೋಪದಿಂದ ಹೊರ ಬರಲು ಆನಂದ ಸಿಂಗ್, ಹೊಸ ಕಾರ್ಖಾನೆ ಸ್ಥಾಪನೆಗೆ ಹೊಸ ಹೆಜ್ಜೆ ಇರಿಸಿದರು. ಆಗ ಮುಂದೆ ಬಂದಿದ್ದು ಮೆ.ಹಂಪಿ ಶುಗರ್ಸ್ ಕಂಪನಿ.

ನಗರದ ಜಂಬುನಾಥ ಹಳ್ಳಿ ಗ್ರಾಮದ ಸರ್ವೆ ನಂಬರ್ 11/1 ಇತರೆ ಸರ್ವೆ ನಂಬರ್‌ಗಳ ಒಟ್ಟು 81.86 ಎಕರೆ ಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಅನಂದ ಸಿಂಗ್ ಸರ್ಕಾರದಿಂದ ಮಂಜೂರಾತಿ ಆದೇಶ ಹೊರಡಿಸಿದರು. ಅಷ್ಟೊತ್ತಿಗೆ ಚುನಾವಣೆ ದಿನಾಂಕ ನಿಗದಿಯಾದ್ದರಿಂದ ಈ ಕಾರ್ಯ ನೆನೆಗುದಿಗೆ ಬಿದ್ದಿತು.

ಈ ವಿಚಾರವನ್ನೇ ವಿರೋಧ ಪಕ್ಷವರು, ಚುನಾವಣೆಯಲ್ಲಿ ಆನಂದ ಸಿಂಗ್ ಅವರನ್ನು ಮಣಿಸಲು ಅಸ್ತ್ರವನ್ನಾಗಿ ಬಳಿಸಿಕೊಂಡರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರ ವಿರುದ್ಧ ಭರ್ಜರಿ ಗೆಲವು ಸಾಧಿಸಿರುವ ಎಚ್.ಆರ್,ಗವಿಯಪ್ಪ ಆನಂದ ಸಿಂಗ್ ಅವರ ಹಂಪಿ ಶುರ‍್ಸ್ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಕನಸನ್ನು ಭಗ್ನಗೊಳಿಸಿದ್ದಾರೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌: 2 ಎಕರೆ ಜಾಗದಲ್ಲಿ ಬೆಳೆದ ಕಬ್ಬು, ತೆಂಗು ಬೆಳೆಗಳು ಬೆಂಕಿಗಾಹುತಿ

Advertisement

Udayavani is now on Telegram. Click here to join our channel and stay updated with the latest news.

Next