Advertisement

ಹಂಪಿ : ಜಿ20 ಶೆರ್ಪಾ ಶೃಂಗಸಭೆಗೆ ತೆರೆ; ಭಾರತದ ಅಧ್ಯಕ್ಷತೆಗೆ ಮುಕುಟ ಪ್ರಾಯ

10:55 PM Jul 16, 2023 | Team Udayavani |

ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಮೂರನೇ ಸಭೆಯಲ್ಲಿ ಪ್ರತಿಪಾದಿಸಿದಂತೆ 55 ರಾಷ್ಟ್ರಗಳನ್ನು ಒಳಗೊಂಡ ಆಫ್ರಿಕನ್‌ ಯೂನಿಯನ್‌ ಒಂದೊಮ್ಮೆ ಸೇರ್ಪಡೆಗೊಂಡಲ್ಲಿ ಜಿ 20 ವೇದಿಕೆಯಲ್ಲಿ ಉದಯೋನ್ಮುಖ ದೇಶಗಳು ಸಹಿತ ಜಾಗತಿಕ ದಕ್ಷಿಣದ ಧ್ವನಿಗಳು ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಗೋಚರಗೊಂಡಿವೆ.

Advertisement

ಭಾರತದ ಜಿ20 ಶೆರ್ಪಾ ಅಮಿತಾಭ್‌ ಕಾಂತ್‌ ಅಧ್ಯಕ್ಷತೆಯಲ್ಲಿ ಹಂಪಿ ಖಾಸಗಿ ರೆಸಾರ್ಟ್‌ನಲ್ಲಿ ಜಿ20 ಸದಸ್ಯರು, ಆಹ್ವಾನಿತ ದೇಶಗಳು, ವಿವಿಧ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳ 120ಕ್ಕೂ ಹೆಚ್ಚು ಪ್ರತಿನಿ ಧಿಗಳು ಭಾಗವಹಿಸಿದ್ದ ಮೂರನೇ ಜಿ20 ಶೆರ್ಪಾ ಸಭೆಯಲ್ಲಿ ಈ ವಿಷಯ ಪ್ರಸ್ತಾವಕ್ಕೆ ಬಂದಿದ್ದು, ವಿವಿಧ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿರುವುದು ಭಾರತದ ಅಧ್ಯಕ್ಷತೆಗೆ ಮುಕುಟ ಪ್ರಾಯವಾಗಿದೆ.

ಸೆಪ್ಟಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಹಲವು ಮಹತ್ವಪೂರ್ಣ ನಿರ್ಣಯಗಳು ಹಾಗೂ ದಿಲ್ಲಿ ನಾಯಕರ ಘೋಷಣೆಗಳ ಜಂಟಿಯಾಗಿ ಕರಡನ್ನು ರಚಿಸಲು ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಹಂಪಿ ಸಾಕ್ಷಿಯಾಯಿತು.

ಸುಸ್ಥಿರ ಅಭಿವೃದ್ಧಿಗೆ ಆದ್ಯತೆ, ಒತ್ತಡದ ಸವಾಲುಗಳನ್ನು ನಿಭಾಯಿಸುವ ಬದ್ಧತೆ, ಸುಸ್ಥಿರ ಅಭಿವೃದ್ಧಿಯ ಗುರಿ, ಹಸುರೀಕರಣ ಬಹುಪಕ್ಷೀಯ ಅಭಿ ವೃದ್ಧಿ ಬ್ಯಾಂಕ್‌ಗಳ ಸುಧಾರಣೆ, ಡಿಜಿಟಲ್‌ ಸಾರ್ವಜನಿಕ ಮೂಲ ಸೌಕರ್ಯ, ಲಿಂಗ ಸಮಾನತೆ ಸಹಿತ ಆದ್ಯತೆಗಳ 6 ಅಂಶಗಳು ಕರಡು ಪ್ರತಿ ಯಲ್ಲಿ ದಾಖಲಾದವು. ಭಾರತೀಯ ಅಧ್ಯಕ್ಷತೆಯ ಮುಂದಾಳತ್ವದಲ್ಲಿ ಜಿ 20 ಸದಸ್ಯರು ಪರಿವರ್ತನಾತ್ಮಕ, ಕ್ರಿಯಾ ಆಧಾರಿತ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 3 ದಿನಗಳ ಸಮಾಲೋಚನೆ ಮಹತ್ವ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next