ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆಮೂಲ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ಶೌಚಗೃಹನಿರ್ಮಾಣಕ್ಕೆ ಮಂಜೂರಾದ ಅನುದಾನ ವಾಪಸ್‌ಹೋಗಿದ್ದು ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟುಜಟಿಲವಾಗಿದೆ.ಐತಿಹಾಸಿಕ ಹಂಪಿಯ ಕೆಲ ಪ್ರಮುಖ ಸ್ಥಳಗಳಲ್ಲಿಅಗತ್ಯ ಮೂಲ ಸೌಲಭ್ಯ ಹಾಗೂ ಶೌಚಗೃಹ ನಿರ್ಮಾಣಕ್ಕಾಗಿ 2019-20ನೇ ಸಾಲಿನಲ್ಲಿ ಒಂದುಕೋಟಿ ರೂ. ಅನುದಾನ ಮಂಜೂರು ಆಗಿತ್ತು.
ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇದಕ್ಕೆಅನುಮತಿ ನೀಡದ ಹಿನ್ನೆಲೆಯಲ್ಲಿ ಈಗ ಅನುದಾನವೇಮರಳಿ ಹೋಗಿದ್ದು, ಕಾಮಗಾರಿಯೇ ರದ್ದಾಗಿದೆ.ದೇಶ-ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿಹಂಪಿಯ ಹೇಮಕೂಟ ಫುಟಿಲ್, ಗಾಯತ್ರಿ ಪೀಠ,ಕಮಲಾಪುರದ ಮಾಲ್ಯವಂತ ಫುಟಿಲ್, ಮಯೂರಭುವನೇಶ್ವರಿ ಹೋಟೆಲ್ ಹಾಗೂ ಪ್ರವಾಸಿ ಮಂದಿರಪ್ರದೇಶದ ಹತ್ತಿರ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಪುರಾತತ್ವ ಇಲಾಖೆನೀರಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿಅನುದಾನ ಸರ್ಕಾರಕ್ಕೆ ವಾಪಸ್ಸು ಹೋಗಿದೆ.
ದೊರೆಯದ ಅನುಮತಿ: ಕಳೆದ ಜೂನ್, 2020ರಲ್ಲಿಹಂಪಿ ಸಮಗ್ರ ನಿರ್ವಹಣೆ ಯೋಜನೆ ಕುರಿತು ಉಪವಿಭಾಗಾ ಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದಸಭೆಯಲ್ಲಿ ಹಂಪಿಯ ಪರಿಸರದಲ್ಲಿ ಶೌಚಗೃಹನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದಕ್ಕೆಅನುಮತಿ ಅಗತ್ಯವಾಗಿತ್ತು. ಹೀಗಾಗಿ ನಿರಕ್ಷೇಪಣಾಪತ್ರ ನೀಡುವಂತೆ ಕೋರಿ ಪ್ರವಾಸೋದ್ಯಮ ಇಲಾಖೆಉಪನಿರ್ದೇಶಕರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ, ಪತ್ರ ಬರೆದಿದ್ದರು. ಇದಕ್ಕೆಎಎಸ್‌ಐಯಿಂದ ಅನುಮತಿ ದೊರೆಯಲ್ಲಿಲ್ಲ.
ಕಾಮಗಾರಿ ರದ್ದತಿಗೆ ಆದೇಶ: ವಿವಿಧ ಕಾರಣಗಳಿಂದಉದ್ದೇಶಿತ ಶೌಚಗೃಹ ನಿರ್ಮಾಣ ಕಾಮಗಾರಿಇಲ್ಲಿವರೆಗೆ ಆರಂಭಿಸಲು ಸಾಧ್ಯವಾಗದೇಇರುವುದರಿಂದ ಒಟ್ಟು 100 ಲಕ್ಷ ರೂ. ವೆಚ್ಚದಕಾಮಗಾರಿಯನ್ನೇ ರದ್ದುಪಡಿಸಲಾಗಿದೆ. 2020ರ ಸೆ.9,ರಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಈಕುರಿತು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅನುದಾನಮರಳಿ ಹೋಗಿದೆ.ಅಭಿವೃದ್ಧಿಗೆ ತೊಡಕು: ಹಂಪಿ ಪ್ರದೇಶದಲ್ಲಿ ಅಭಿವೃದ್ಧಿಗೆಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆನಿಯಮಗಳ ತೊಡಕಿದ್ದು, ಇದರಿಂದ ಅಭಿವೃದ್ಧಿಕುಂಠಿತಗೊಂಡಿದೆ ಎಂಬ ಮಾತು ಕೇಳಿಬರುತ್ತಿದೆ.
ಆದರೆ ಇಲ್ಲಿಯ ಪ್ರತಿಯೊಂದು ಪ್ರದೇಶವೂ ಐತಿಹಾಸಿಕಮಹತ್ವ ಪಡೆದಿರುವುದರಿಂದ ಎಲ್ಲೆಂದರಲ್ಲಿ ಕಾಮಗಾರಿನಡೆಸುವುದೂ ಅಷ್ಟು ಸುಲಭವಲ್ಲ. ಅಲ್ಲದೆ ಇದುಸರಿಯಾದ ಕ್ರಮವೂ ಅಲ್ಲ. ಹೀಗಾಗಿ ಹಂಪಿಯಲ್ಲಿಸಣ್ಣದೊಂದು ರಸ್ತೆ ಅಗೆಯಲು ಕೂಡ ಪುರಾತತ್ವ ಇಲಾಖೆಅನುಮತಿ ಬೇಕಿದೆ. ಐತಿಹಾಸಿಕ ಮಹತ್ವ ಹಿನ್ನೆಲೆಯಲ್ಲಿಅನೇಕ ಕಾಮಗಾರಿಗಳಿಗೆ ಅನುಮತಿ ಸಿಗುತ್ತಿಲ್ಲ.ಇದು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಈ ತೊಡಕನ್ನು ನಿವಾರಿಸಿ ಮೂಲಸೌಲಭ್ಯಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ, ಪುರಾತತತ್ವಇಲಾಖೆ ಹಾಗೂ ಇನ್ನುಳಿದ ಎಲ್ಲ ಇಲಾಖೆಗಳುಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಪಿ.ಸತ್ಯನಾರಾಯಣ