Advertisement

ಹಂಪಿಗೆ ಹರಿದು ಬಂದ ಜನಸಾಗರ!

01:52 PM Oct 17, 2021 | Team Udayavani |

ಹೊಸಪೇಟೆ: ನಾಡಹಬ್ಬದ ದಸರಾ ಹಬ್ಬದ ಸಾಲು,ಸಾಲು ರಜೆ ಹಿನ್ನೆಲೆಯಲ್ಲಿ ದೇಶ-ವಿದೇಶಿ ಪ್ರವಾಸಿಗರುವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ, ಸ್ಮಾರಕಗಳನ್ನುಕಣ್ತುಂಬಿಕೊಂಡರು.ದಸರಾ ಹಬ್ಬದ ಜತೆಗೆ ವೀಕೆಂಡ್‌ ಇದ್ದ ಹಿನ್ನೆಲೆಯಲ್ಲಿ ಶನಿವಾರ ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆಸುಮಾರು 12 ಸಾವಿರಕ್ಕೂ ಅ ಧಿಕ ಪ್ರವಾಸಿಗರುಆಗಮಿಸಿ, ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

Advertisement

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲ, ಎದುರುಬಸವಣ್ಣ ಮಂಟಪ, ಸಾಲು ಮಂಟಪ, ರಥ ಬೀದಿ,ಕಡಲೆ ಕಾಳು, ಸಾಸಿವೆ ಕಾಳು, ಶ್ರೀಕೃಷ್ಣ ದೇಗುಲ, ಶ್ರೀಕೃಷ್ಣಬಜಾರ್‌, ನೆಲಸ್ತರದ ಶಿವ ದೇಗುಲ, ಅಕ್ಕ-ತಂಗಿಯರಗುಡ್ಡ, ಹಜಾರ ರಾಮ ದೇಗುಲ, ಕಮಲ ಮಹಲ್‌,ಆನೆ ಲಾಯ, ಮಹಾನವಮಿ ದಿಬ್ಬ, ವಿಜಯ ವಿಠಲದೇಗುಲ, ಕಲ್ಲಿನ ತೇರು, ಕುದುರೆಗೊಂಬೆ ಮಂಟಪ,ಪುರಂದರದಾಸರ ಮಂಟಪ, ಅಚ್ಯುತರಾಯದೇಗುಲ, ವರಾಹ ದೇಗುಲ, ಚಕ್ರತೀರ್ಥ,ವಾಲಿ-ಸುಗ್ರೀವ ಗುಹೆ, ಸೀತೆ ಸೆರಗು, ರಾಮಲಕ್ಷ್ಮಣದೇಗುಲ, ಯಂತ್ರೋದ್ಧಾರಕ ಆಂಜನೇಯ ದೇಗುಲಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು.

ಅಲ್ಲದೇ, ತುಂಗಭದ್ರಾ ತಟದಲ್ಲೂವಿಶ್ರಾಂತಿ ಪಡೆದರು.ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು,ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದಪ್ರವಾಸಿಗರು ಆಗಮಿಸಿದ್ದರು. ಇನ್ನೂ ರಾಜ್ಯದಬೆಂಗಳೂರು, ತುಮಕೂರು, ಚಿತ್ರದುರ್ಗ,ದಾವಣಗೆರೆ, ಹಾವೇರಿ, ಶಿವಮೊಗ್ಗ, ರಾಯಚೂರು,ಕೊಪ್ಪಳ, ವಿಜಯನಗರ, ಬಳ್ಳಾರಿ, ಗದಗ, ಧಾರವಾಡಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಪ್ರವಾಸಿಗರುಆಗಮಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next