Advertisement

ಲಕ್ಷಕ್ಕೂ ಹೆಚ್ಚು ಜನರಿಂದ ಹಂಪಿ ಸ್ಮಾರಕ ವೀಕ್ಷಣೆ

06:20 PM Oct 27, 2022 | Team Udayavani |

ಬಳ್ಳಾರಿ: ನೆರೆಯ ವಿಜಯನಗರ ಜಿಲ್ಲೆಯ ಐತಿಹಾಸಿಕ ತಾಣ “ಹಂಪಿ’ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಳೆದ ದಸರಾ ಹಬ್ಬದಿಂದ ದೀಪಾವಳಿ ನಡುವೆ ಸಾಲು ಸಾಲು ರಜೆಗಳು ಬಂದಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ 20 ದಿನಗಳಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಹಂಪಿಗೆ ಭೇಟಿ ನೀಡಿದ್ದಾರೆ ಎಂದು ಪುರಾತತ್ವ ಇಲಾಖೆ ಅ ಧಿಕಾರಿಗಳು ಅಂದಾಜಿಸಿದ್ದಾರೆ.

Advertisement

ಜನವರಿಯಿಂದ ಆಗಸ್ಟ್‌ ತಿಂಗಳವರೆಗೆ ದೇಶೀಯ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಹೋಟೆಲ್‌ ವ್ಯವಹಾರ ಒಂದಷ್ಟು ಸುಧಾರಿಸಲಿದೆ. ಸೆಪ್ಟೆಂಬರ್‌ ತಿಂಗಳಿಂದ ವಿದೇಶಿ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಲಿದ್ದು, ಆಗ ವ್ಯವಹಾರದಲ್ಲಿ ಒಂದಷ್ಟು ವೃದ್ಧಿಯಾಗಲಿದೆ.

ಆದರೂ ಪ್ರವಾಸಿಗಳ ತಾಣಗಳಲ್ಲಿ ಇದನ್ನು ಅಂದಾಜಿಸುವುದು ಕಷ್ಟ. ಒಂದು ವಾರ ಜಾಸ್ತಿಯಾಗಿ, ಮತ್ತೂಂದು ವಾರ ಕುಸಿಯಲೂಬಹುದು. ಆದರೂ ಈ ಅವಧಿಯಲ್ಲಿ ಶೇ. 30-40ರಷ್ಟು ವ್ಯವಹಾರ ವೃದ್ಧಿಯಾಗಿರಲಿದೆ ಎಂದು ಹೊಸಪೇಟೆಯ ಹೋಟೆಲ್‌ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next