Advertisement

Hampi ಕನ್ನಡ ವಿವಿ 32ನೇ ನುಡಿಹಬ್ಬ: ಮೂವರು ಗಣ್ಯರಿಗೆ ನಾಡೋಜ ಪ್ರದಾನ

09:01 PM Jan 10, 2024 | Team Udayavani |

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ ಘಟಿಕೋತ್ಸವದ ಪ್ರಯುಕ್ತ ರಾಜ್ಯದ ಮೂವರು ಗಣ್ಯರಿಗೆ ಬುಧವಾರ ನಾಡೋಜ ಗೌರವ ಪದವಿ ಮಾಡಲಾಯಿತು.

Advertisement

ಬಸವ ತತ್ವವನ್ನೇ ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಿದ್ದ ಪೂಜ್ಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದೇವರ ಬಸವಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿರುವ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದೇವರು, ಬಹುಭಾಷಾ ಪಂಡಿತರಾಗಿ ಸಮರ್ಥ ಅನುವಾದಕರೆಂದು ಖ್ಯಾತಿ ಪಡೆದ ಮೂಲತಃ ನಮ್ಮ ರಾಜ್ಯದ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಆಂಧ್ರಪ್ರದೇಶದ ಸರ್ಕಾರಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಬೆಂಗಳೂರಿನ ಡಾ ಎಸ್.ಸಿ.ಶರ್ಮಾ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಯಿತು.

ವಿವಿಯ ವಿದ್ಯಾರಣ್ಯದ `ನವರಂಗ’ ಬಯಲು ರಂಗಮಂದಿರದಲ್ಲಿ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ನಾಡೋಜ ಗೌರವ ಪದವಿ ಪ್ರದಾನ ಮಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಷ್ಟ್ರ ಕವಿ ಕುವೆಂಪು, ಸಿದ್ದವನಹಳ್ಳಿ ನಿಜಲಿಂಗಪ್ಪ, ಗಂಗೂಬಾಯಿ ಹಾನಗಲ್, ಡಾ. ಪಾಟೀಲ ಪುಟ್ಟಪ್ಪ, ಡಾ.ರಾಜಕುಮಾರ್ ಸೇರಿದಂತೆ ಇಲ್ಲಿಯವರೆಗೆ 95 ಗಣ್ಯರಿಗೆ ನಾಡೋಜ ಗೌರವ ಪದವಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next