Advertisement

5ನೇ ಬಾರಿ ರದ್ದಾಗುತ್ತಿದೆ ಹಂಪಿ ಉತ್ಸವ

06:00 AM Nov 28, 2018 | |

ಬಳ್ಳಾರಿ: ಐತಿಹಾಸಿಕ ಹಂಪಿಯಲ್ಲಿ ಪ್ರತಿವರ್ಷ ಆಚರಿಸಲಾಗುತ್ತಿದ್ದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದ ಹಂಪಿ ಉತ್ಸವ ಬರ 
ಎದುರಾಗಿರುವ ಹಿನ್ನೆಲೆಯಲ್ಲಿ ಮುಂದೂಡಿರುವುದು ನಿರಾಸೆ ಮೂಡಿಸಿದೆ. “ಪ್ರಸಕ್ತ ವರ್ಷ ಹಂಪಿ ಉತ್ಸವವನ್ನು ಮುಂದೂಡಲಾಗಿದ್ದು, ಮುಂದಿನ ವರ್ಷ ಆಚರಿಸಲು ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದು, ಕಲಾವಿದರು ಸೇರಿ ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ಹಂಪಿ ಉತ್ಸವ ಆರಂಭವಾದ ಬಳಿಕ ಈವರೆಗೆ ಒಟ್ಟು 5 ಬಾರಿ
ವಿವಿಧ ಕಾರಣಗಳಿಂದ ರದ್ದುಗೊಂಡಿದೆ. ನಾಡಹಬ್ಬ ಮೈಸೂರು ದಸರಾದ ಪ್ರೇರಣೆ ಹಂಪಿ ಉತ್ಸವವನ್ನು 1995ರಿಂದ 2017ರ
ವರೆಗೆ ಕೆಲ ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ. ಅದರಂತೆ ಪ್ರಸಕ್ತ ವರ್ಷವೂ
ಹಂಪಿ ಉತ್ಸವವನ್ನು ಆಚರಿಸುವ ಸಲುವಾಗಿ ಕಳೆದ ಆ.15, 16 ರಂದು ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್‌,
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಎಂದಿನಂತೆ ಈ ಬಾರಿಯೂ ನ.3, 4, 5 ರಂದು ಹಂಪಿ ಉತ್ಸವ
ಆಚರಿಸಲು ನಿರ್ಧರಿಸಿ, ತಿಂಗಳೊಳಗಾಗಿ ಕಲಾವಿದರ ಪಟ್ಟಿಯನ್ನು ಸಿದಟಛಿಪಡಿಸುವಂತೆಯೂ ಸೂಚಿಸಿದ್ದರು. ಆದರೆ, ಸ್ಥಳೀಯ ಸಂಸ್ಥೆ ಮತ್ತು ಬಳ್ಳಾರಿ ಲೋಕಸಭೆ ಉಪಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಉತ್ಸವವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಆಚರಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ, ಇದೀಗ ಹಂಪಿ ಉತ್ಸವವನ್ನು ಪ್ರಸಕ್ತ ವರ್ಷ ಸಂಪೂರ್ಣ ಕೈ ಬಿಟ್ಟು, ಮುಂದಿನ ವರ್ಷ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ.

Advertisement

ಕನಕ-ಪುರಂದರ ಹೆಸರಲ್ಲಿ ಆರಂಭವಾಗಿದ್ದ ಉತ್ಸವ: ಉತ್ಸವ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದ ದಿ|
ಎಂ.ಪಿ. ಪ್ರಕಾಶ್‌ ಅವರ ಕನಸಿನ ಕೂಸಾಗಿತ್ತು. 1988 ರಲ್ಲಿ ಮೊದಲಿಗೆ ಕನಕ-ಪುರಂದರ ಉತ್ಸವವೆಂದು ಆಚರಿಸಿದ್ದ ಈ ಉತ್ಸವವನ್ನು 2ನೇ ಬಾರಿಗೆ 1989ರಲ್ಲಿ ಆಚರಣೆಗೆ ಸಿದ್ಧತೆ ನಡೆಸಿತ್ತಾದರೂ, ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್‌ಸಾಬ್‌ ಅವರ ನಿಧನದಿಂದಾಗಿ ಉತ್ಸವ ಸ್ಥಗಿತಗೊಂಡಿತ್ತು. ನಂತರ 1994ರ ವರೆಗೆ ಅಚರಿಸಲಿಲ್ಲ. 1995ರಲ್ಲಿ ಎಂ.ಪಿ.ಪ್ರಕಾಶ್‌ ಅವರು ಪುನಃ ಮುತುವರ್ಜಿ ವಹಿಸಿ ಹಂಪಿ ಉತ್ಸವ ಆಚರಿಸಿದರು. 1995 ರಿಂದ 1999ರವರೆಗೆ ಪ್ರತಿವರ್ಷ ನ.3,4,5 ರಂದು ಅದ್ದೂರಿಯಾಗಿ ನಡೆದ ಉತ್ಸವ ಗಮನ ಸೆಳೆದಿತ್ತು. 

ಬರ ಹಿನ್ನೆಲೆ, ಹಂಪಿ ಉತ್ಸವ ರದ್ದು: ಡಿಕೆಶಿ
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕು ಸಹಿತವಾಗಿ ರಾಜ್ಯದ 100 ತಾಲೂಕುಗಳಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹಂಪಿ ಉತ್ಸವವನ್ನು ಈ ವರ್ಷ ಆಚರಿಸದಿರಲು ನಿರ್ಧರಿಸಲಾಗಿದೆ ಎಂದು ಜಲ ಸಂಪನ್ಮೂಲ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಬರ ಇರುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಬರ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದು, ಹಂಪಿ ಉತ್ಸವ ಆಚರಣೆಗೆ ಸಮಯ ಸಿಗುವುದಿಲ್ಲ. ಈ ಬಗ್ಗೆ ಜಿಲ್ಲೆಯ ಸ್ಥಳೀಯ ಮುಖಂಡರು, ಶಾಸಕರು ಹಾಗೂ ಕಲಾವಿದರೊಂದಿಗೂ 
ಮಾತನಾಡಿದ್ದೇನೆ. ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಉತ್ಸವ ಮಾಡಲು ನಿರ್ಧರಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು. 

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next