Advertisement

ಹಂಪಿಗೆ ರಜನೀಶ್‌ ಗೋಯಲ್‌ ಭೇಟಿ

05:37 PM Jan 23, 2021 | Team Udayavani |

ಹೊಸಪೇಟೆ: ಸರಕಾರದ ಗೃಹ ಕಾರ್ಯದರ್ಶಿ ಹಾಗೂ ಹಿರಿಯ ಐಎಎಸ್‌ ಅಧಿ ಕಾರಿ ರಜನೀಶ್‌ ಗೋಯಲ್‌ ವಿಶ್ವವಿಖ್ಯಾತ ಹಂಪಿಗೆ ಶುಕ್ರವಾರ ಭೇಟಿ ನೀಡಿದರು. ಪರಿವಾರ ಸಮೇತ ಹಂಪಿಗೆ ಭೇಟಿ ನೀಡಿದ ರಜನೀಶ್‌ ಗೋಯಲ್‌ ಅವರು ಪುತ್ರಿ ಹಾಗೂ ತಂದೆ-ತಾಯಿಯರೊಂದಿಗೆ ವಿಜಯ ವಿಠಲ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಸ್ಥಳಗಳನ್ನು ವೀಕ್ಷಿಸಿದರು. ನಂತರ ಅವರು ಹಂಪಿ ಸಮೀಪದ ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ನಲ್ಲಿ ಕುಟುಂಬ ಸಮೇತ ಸಫಾರಿ ಕೈಗೊಂಡರು. ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಅಧಿಕಾರಿಗಳು, ಪುರಾತತ್ವ, ಝೂಲಾಜಿಕಲ್‌ ಪಾರ್ಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನಿತರರಿದ್ದರು.

Advertisement

ಇದನ್ನೂ ಓದಿ : ಗ್ರಾಪಂ ವಾರ್ಡ್‌ ಬದಲಾವಣೆಯಲ್ಲಿ ಲೋಪವಾಗಿದ್ದು ಖಚಿತ: ಎಸಿ

Advertisement

Udayavani is now on Telegram. Click here to join our channel and stay updated with the latest news.

Next