Advertisement
ಪ್ರಮುಖ ರಸ್ತೆಗಳು ಅಗಲೀಕರಣ ಗೊಂಡರೂ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜ ನಿಕರು ರಸ್ತೆಗಳಲ್ಲಿಯೇ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಅನಿವಾರ್ಯ ಸ್ಥಿತಿ ಇದೆ. ಮಾತ್ರ ವಲ್ಲದೆ, ನಗರದ ಬಹುತೇಕ ಬಹು ಮಹಡಿ ಕಟ್ಟಡಗಳು, ಅಂಗಡಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ‘ನೋ ಪಾರ್ಕಿಂಗ್’ ಸ್ಥಳದಲ್ಲಿಯೇ ಖಾಸಗಿ ಕಾರು, ದ್ವಿಚಕ್ರ ವಾಹನ ಗಳನ್ನು ಪಾರ್ಕ್ ಮಾಡುವುದು ಮುಂದುವರಿಯುತ್ತಿದೆ.
- 600ಕ್ಕೂ ಅಧಿಕ ವಾಹನ ಮಲ್ಟಿಲೆವೆಲ್ ಕಾರ್ .ಪಾರ್ಕಿಂಗ್‌ನಲ್ಲಿ ಅವಖಾಶ
- 2.10ಎಕರೆ ಪ್ರದೇಶ ಕಾಯ್ದಿರಿಸಿದ ಪ್ರಸ್ತಾವಿತ ಜಾಗ
ಮಂಗಳೂರು ನಗರದಲ್ಲಿ ಸ್ಥಳಾವಕಾಶ ಕೊರತೆ ತೀವ್ರವಾಗಿದೆ. ಇದರಿಂದಾಗಿ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿಸಿಕೊಳ್ಳುವುದು ಕಷ್ಟ ಸಾಧ್ಯ. ಜಾಗದ ಬೆಲೆ ವಿಪರೀತವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯೂ ಕ್ಷಿಷ್ಟಕರ. ಈ ಹಿನ್ನಲೆಯಲ್ಲಿ ಲಭ್ಯ ಜಾಗಗಳಲ್ಲೇ ಅತೀ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡುವುದು ಅನಿವಾರ್ಯ. ಈ ಹಿನ್ನಲೆಯಲ್ಲಿ ಈಗಾಗಲೇ ದೇಶದ ಇತರ ಮಹಾನಗರಗಳಲ್ಲಿ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಂಗಳೂರಿನಲ್ಲೂ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಇನ್ನಾದರೂ ಜೀವ ಸ್ವರೂಪ ಪಡೆಯಬೇಕಿದೆ.
Related Articles
ಒಂದೆಡೆ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಏರಿಕೆಯಾಗುತ್ತಿದ್ದಂತೆ ನಗರದಲ್ಲಿ ಹೊಸ ವಾಹನಗಳು ರಸ್ತೆಗಿಳಿಯುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಪ್ರತೀ ತಿಂಗಳು ನಗರದಲ್ಲಿ 3 ಸಾವಿರಕ್ಕೂ ಅಧಿಕ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ಭವಿಷ್ಯದಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ನಗರಕ್ಕೆ ಬಹುದೊಡ್ಡ ಸವಾಲಾಗಲಿದೆ.
Advertisement
ಅಂದಹಾಗೆ, ಮಂಗಳೂರಿನಲ್ಲಿ ಪ್ರತೀ ತಿಂಗಳು ಸುಮಾರು 4 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಅಂತೂ, 1 ವರ್ಷದಲ್ಲಿ ನೋಂದಣಿಯಾದ ವಾಹನಗಳ ಪೈಕಿ 15 ಸಾವಿರದಷ್ಟು ದ್ವಿಚಕ್ರ ವಾಹನಗಳು, 6 ಸಾವಿರದಷ್ಟು ಕಾರುಗಳು ಪ್ರತೀ ವರ್ಷ ಸೇರುತ್ತಲೇ ಇದೆ.
ಏನಿದು ಸಮಸ್ಯೆ?ಮಂಗಳೂರು ನಗರವು ಯೋಜಿತವಾಗಿ ಬೆಳವಣಿಗೆ ಹೊಂದಿಲ್ಲ ಎನ್ನುವುದು ಎಲ್ಲರೂ ಒಪ್ಪುವ ಮಾತು. ಇದಕ್ಕೆ ಕಾರಣ ಹಲವು. ಒಂದೊಮ್ಮೆ ಅಗಲ ಕಿರಿದಾಗಿದ್ದು, ಕಿಷ್ಕಿಂಧೆಯಂತಿದ್ದ ನಗರದ ಪ್ರಮುಖ ರಸ್ತೆಗಳ ಪೈಕಿ ಕೆಲವು ರಸ್ತೆಗಳು ಈಗಾಗಲೇ ಅಗಲೀಕರಣಗೊಂಡಿವೆ; ಕೆಲವು ರಸ್ತೆಗಳು ಈಗ ವಿಸ್ತರಣೆ ಆಗುತ್ತಿವೆ. ಆದರೆ ಈಗಾಗಲೇ ಅಗಲೀಕರಣಗೊಂಡ ರಸ್ತೆಗಳಲ್ಲಿಯೂ ಸಂಚಾರ ಸಮಸ್ಯೆ ಬಗೆಹರಿದಿಲ್ಲ. ವಾಹನಗಳ ಸಂಖ್ಯೆ ಹೆಚ್ಚಳ ಆಗಿರುವುದು ಮುಖ್ಯ ಕಾರಣ. ಬಹು ಮಹಡಿ ವಾಣಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ನಿಯಮಗಳ ಪ್ರಕಾರ ವಾಹನ ಪಾರ್ಕಿಂಗ್‌ಗೆ ಮೀಸಲಾದ ಜಾಗದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿರುವುದು, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತರ ಕಾರಣಗಳು. ನಗರದಲ್ಲಿ ಈಗ ವ್ಯಾಪಾರ- ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯಗಳು, ವಿವಿಧ ಸಂಘ, ಸಂಸ್ಥೆಗಳ ಕಚೇರಿಗಳು, ಸರಕಾರಿ ಇಲಾಖೆಗಳ ಕಚೇರಿ ಕಟ್ಟಡಗಳ ಸಂಖ್ಯೆ ಜಾಸ್ತಿಯಾಗಿದೆ. ಆದರೆ ರಸ್ತೆಗಳ ಸಂಖ್ಯೆ ಹೆಚ್ಚಿಲ್ಲ. ಕೆಲವು ರಸ್ತೆಗಳ ವಿಸ್ತರಣೆ ಆಗಿದ್ದರೂ ಅದರ ಪ್ರಯೋಜನ ಸಂಪೂರ್ಣವಾಗಿ ಸಂಚಾರ ವ್ಯವಸ್ಥೆಗೆ ಲಭಿಸಿಲ್ಲ. ರಸ್ತೆಯ ಬದಿಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸಲಾಗುತ್ತಿದ್ದು, ವಾಹನ ಪಾರ್ಕಿಂಗ್‌ಗಾಗಿಯೇ ರಸ್ತೆಯನ್ನು ಅಭಿವೃದ್ಧಿ ಮಾಡಿ ಕೊಟ್ಟಂತೆ ಕಂಡು ಬರುತ್ತದೆ! - ದಿನೇಶ್ ಇರಾ