Advertisement

Hamoon: ಹಮೂನ್‌ ಎಫೆಕ್ಟ್- 7 ರಾಜ್ಯಗಳಲ್ಲಿ ಮಳೆ

11:12 PM Oct 24, 2023 | Team Udayavani |

ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ “ಹಮೂನ್‌’ ಚಂಡಮಾರುತವು ಭಾರೀ ಚಂಡಮಾರುತವಾಗಿ ತೀವ್ರತೆ ಪಡೆದುಕೊಂಡಿದ್ದು, ಬುಧವಾರ ಸಂಜೆ ವೇಳೆಗೆ ಬಾಂಗ್ಲಾ ಕರಾವಳಿಯನ್ನು ಹಾದುಹೋಗಲಿದೆ. ಬಾಂಗ್ಲಾ ಕರಾವಳಿಗೆ ಅಪ್ಪಳಿಸುವ ಮುನ್ನ ಚಂಡಮಾರುತ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

ಆದರೆ ಹಮೂನ್‌ ಎಫೆಕ್ಟ್ ಎಂಬಂತೆ ಪಶ್ಚಿಮ ಬಂಗಾಲ, ಒಡಿಶಾ, ಮಣಿಪುರ, ಮಿಜೋರಾಂ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರದಲ್ಲೂ ದಟ್ಟ ಅಲೆಗಳು ಏಳಲಿದ್ದು, ಸಮುದ್ರ ಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಇನ್ನೊಂದೆಡೆ ಹಿಂದೂ ಮಹಾಸಾಗರದಲ್ಲಿ ಎದ್ದಿರುವ ತೇಜ್‌ ಚಂಡಮಾರುತವು ಯೆಮೆನ್‌ ಕರಾವಳಿಯನ್ನು ದಾಟಿದ್ದು, ಮಂಗಳವಾರ ಅದು ಕೂಡ ದುರ್ಬಲಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next