Advertisement

ಜೀತ್‌ ರಾವಲ್‌, ಲ್ಯಾಥಂ ಶತಕ

12:30 AM Mar 02, 2019 | Team Udayavani |

ಹ್ಯಾಮಿಲ್ಟನ್‌: ಆರಂಭಿಕರಾದ ಟಾಮ್‌ ಲ್ಯಾಥಂ ಮತ್ತು ಜೀತ್‌ ರಾವಲ್‌ ಅವರ ಅಮೋಘ ಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಹ್ಯಾಮಿಲ್ಟನ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಭಾರೀ ಮೇಲುಗೈ ಸಾಧಿಸಿದೆ.

Advertisement

ಬಾಂಗ್ಲಾದೇಶದ 234 ರನ್ನುಗಳಿಗೆ ಉತ್ತರವಾಗಿ ದ್ವಿತೀಯ ದಿನವಾದ ಶುಕ್ರವಾರ ಆತಿಥೇಯ ನ್ಯೂಜಿಲ್ಯಾಂಡ್‌ 4 ವಿಕೆಟಿಗೆ 451 ರನ್‌ ಪೇರಿಸಿ 217 ರನ್ನುಗಳ ಮುನ್ನಡೆ ಗಳಿಸಿದೆ. ಲ್ಯಾಥಂ 161 ರನ್‌ (248 ಎಸೆತ, 17 ಬೌಂಡರಿ, 3 ಸಿಕ್ಸರ್‌) ಬಾರಿಸಿದರೆ, ರಾವಲ್‌ 220 ಎಸೆತಗಳಿಂದ 132 ರನ್‌ (19 ಬೌಂಡರಿ, 1 ಸಿಕ್ಸರ್‌) ಹೊಡೆದು ಮೊದಲ ಶತಕ ಸಂಭ್ರಮ ಆಚರಿಸಿದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 254 ರನ್‌ ಒಟ್ಟುಗೂಡಿತು. 

ನಾಯಕ ಕೇನ್‌ ವಿಲಿಯಮ್ಸನ್‌ 93 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಹೆನ್ರಿ ನಿಕೋಲ್ಸ್‌ 53 ರನ್‌ ಹೊಡೆದರು.
ಬಾಂಗ್ಲಾ ಪರ ಓಪನರ್‌ ತಮಿಮ್‌ ಇಕ್ಬಾಲ್‌ ಏಕಾಂಗಿಯಾಗಿ ಹೋರಾಡಿ 126 ರನ್‌ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next