ಗಾಜಾ: ಇಸ್ರೇಲ್ ಗಾಜಾದ ಮೇಲೆ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಒತ್ತೆಯಾಳಾಗಿರಿಸಿರುವ 50 ಮಂದಿ ಇಸ್ರೇಲಿಗಳನ್ನು ಹತ್ಯೆಗೈಯಲಾಗಿದೆ ಎಂದು ಹಮಾಸ್‌ನ ಸಶಸ್ತ್ರ ವಿಭಾಗ ಗುರುವಾರ ಹೇಳಿದೆ.
ಹತ್ಯಾಕಾಂಡಗಳ ಪರಿಣಾಮವಾಗಿ ಗಾಜಾ ಪಟ್ಟಿಯಲ್ಲಿ ಹತ್ಯೆಗೀಡಾದ ಒತ್ತೆಯಾಳುಗಳ ಸಂಖ್ಯೆ ಸುಮಾರು 50 ಕ್ಕೆ ತಲುಪಿದೆ ಎಂದು ಅಲ್-ಕಸ್ಸಾಮ್ ಬ್ರಿಗೇಡ್ಸ್ ಝಿಯೋನಿಸ್ಟ್ ಗುಂಪು ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ ನಂತರ ಇಸ್ರೇಲ್ ಗಾಜಾದ ಮೇಲೆ ಭಾರಿ ವಾಯು ಮತ್ತು ಫಿರಂಗಿ ಬಾಂಬ್ ದಾಳಿ ನಡೆಸುತ್ತಿದೆ.
ಮಾಸ್ಕೋಗೆ ಭೇಟಿ
ಹಮಾಸ್‌ನ ನಿಯೋಗವು ಮಾಸ್ಕೋಗೆ ಭೇಟಿ ನೀಡುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಗುರುವಾರ ಯಾವುದೇ ಹೆಚ್ಚಿನ ವಿವರಗಳನ್ನು ನೀಡದೆ ತಿಳಿಸಿದ್ದಾರೆ. ಮಾಸ್ಕೋಗೆ ಭೇಟಿ ನೀಡಿದವರಲ್ಲಿ ಹಮಾಸ್‌ನ ಹಿರಿಯ ಸದಸ್ಯ ಅಬು ಮರ್ಜೂಕ್ ಕೂಡ ಸೇರಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ನಿಯೋಗದ ಮೂಲವನ್ನು ಉಲ್ಲೇಖಿಸಿ ರಷ್ಯಾದ ಸರ್ಕಾರಿ RIA ಸುದ್ದಿ ಸಂಸ್ಥೆ ಹೇಳಿದೆ. ಇಸ್ರೇಲ್, ಇರಾನ್, ಪ್ಯಾಲೇಸ್ಟಿನಿಯನ್ ಅಥಾರಿಟಿ ಮತ್ತು ಹಮಾಸ್ ಸೇರಿದಂತೆ ಮಧ್ಯಪ್ರಾಚ್ಯದ ಎಲ್ಲಾ ಪ್ರಮುಖರೊಂದಿಗೆ ರಷ್ಯಾ ಸಂಬಂಧಗಳನ್ನು ಹೊಂದಿದೆ.
ಅರಬ್ ರಾಷ್ಟ್ರಗಳ ಆಕ್ರೋಶ
ಸೌದಿ ಅರೇಬಿಯಾ,ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಬಹ್ರೇನ್, ಓಮನ್, ಕತಾರ್, ಕುವೈತ್, ಈಜಿಪ್ಟ್ ಮತ್ತು ಮೊರಾಕೊದ ವಿದೇಶಾಂಗ ಮಂತ್ರಿಗಳು ಇಸ್ರೇಲ್ ಗಾಜಾದಲ್ಲಿ ನಾಗರಿಕರನ್ನು ಗುರಿಯಾಗಿಸುವುದು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯನ್ನು ಗುರುವಾರ ಖಂಡಿಸಿದ್ದಾರೆ. ಜಂಟಿ ಹೇಳಿಕೆಯಲ್ಲಿ ಸ್ವಯಂ ರಕ್ಷಣೆಯ ಹಕ್ಕು ಕಾನೂನನ್ನು ಮುರಿಯುವುದನ್ನು ಮತ್ತು ಪ್ಯಾಲೆಸ್ಟೀನಿಯರ ಹಕ್ಕುಗಳನ್ನು ನಿರ್ಲಕ್ಷಿಸುವುದನ್ನು ಸಮರ್ಥಿಸುವುದಿಲ್ಲ ಎಂದು ಉಲ್ಲೇಖಿಸಿದೆ.