ಜೆರುಸೆಲಂ: ಇಸ್ರೇಲ್ನ ಕಿಬ್ಬುಟ್ಜ್ ರೀಮ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದರ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿ ಸುಮಾರು ಇನ್ನೂರು ಮಂದಿಯನ್ನು ಅಪಹರಿಸಿದ್ದು ಇದೀಗ ಹಮಾಸ್ ಒತ್ತೆಯಾಳುಗಳ ವಿಡಿಯೋ ವೊಂದನ್ನು ಬಿಡುಗಡೆ ಮಾಡಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ವೀಡಿಯೊ ಕಾಣಿಸಿಕೊಂಡ ಗಂಟೆಗಳ ನಂತರ, ಇಸ್ರೇಲಿ ಮಿಲಿಟರಿ ವಕ್ತಾರರು ಇದು ಹಮಾಸ್‌ನ “ಮಾನಸಿಕ ಯುದ್ಧದ ಒಂದು ಭಾಗ” ಎಂದು ಹೇಳಿಕೊಂಡಿದ್ದಾರೆ.
ಒಂದು ವಾರದ ಹಿಂದೆ ಇಸ್ರೇಲ್ನ ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರು ಮನಬಂದಂತೆ ಅಲ್ಲಿ ನರೆದಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು ಜೊತೆಗೆ ನೂರಾರು ಮಂದಿಯನ್ನು ಅಪಹರಣ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡಾ ದಾಳಿ ನಡೆಸಿ ಹಲವು ಸಾವಿರ ಮಂದಿಯನ್ನು ಹತ್ಯೆಮಾಡಿತ್ತು ಈ ನಡುವೆ ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾದ ನೂರಾರು ಮಂದಿಯನ್ನು ರಕ್ಷಣೆ ಮಾಡಿದ್ದೂ ಇನ್ನೂ ಹಲವು ಮಂದಿಯ ರಕ್ಷಣೆಗೆ ಕಾರ್ಯ ತಂತ್ರ ರೂಪಿಸುತ್ತಿದ್ದಾರೆ ಇದರ ನಡುವೆ ಹಮಾಸ್ ಒಳ್ಳೆಯಾಳುಗಳಲ್ಲಿ ಒಬ್ಬರಾದ 21 ವರ್ಷದ ಇಸ್ರೇಲಿ ಯುವತಿ ಮಿಯಾ ಶೆಮ್ ಅವರ ವಿಡಿಯೋವನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ವಿಡಿಯೋ ದಲ್ಲಿ ಯುವತಿಯ ಕೈಗೆ ಗಂಭೀರ ಗಾಯವಾಗಿದ್ದು ಆಕೆಗೆ ಚಿಕಿತ್ಸೆ ನೀಡುತ್ತಿರುವುದು ಇಲ್ಲಿ ಕಾಣಬಹುದು ಅಲ್ಲದೆ ವಿಡಿಯೋದಲ್ಲಿ ಆಕೆ ತನ್ನನ್ನು ಇಲ್ಲಿ ಉತ್ತಮವಾದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದು ಬಳಿಕ ತನ್ನನ್ನು ಆದಷ್ಟು ಬೇಗ ಇಲ್ಲಿಂದ ಬಿಡುಗಡೆ ಮಾಡಿ ನಾನು ನನ್ನ ಹೆತ್ತವರನ್ನು ನೋಡಬೇಕು ಎಂದು ಹೇಳಿಕೊಂಡಿದ್ದಾರೆ.
ಹಮಾಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಎರಡು ವಿಚಾರ ಇರಬಹುದು ಒಂದು ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ರಾಕೆಟ್ ದಾಳಿ ನಡೆಸಿ ಸಾವಿರಾರು ಮಂದಿಯನ್ನು ಹತ್ಯೆ ಮಾಡಿದ್ದರಿಂದ ಹಮಾಸ್ ಉಗ್ರರು ಇಸ್ರೇಲ್ ದಾಳಿಗೆ ಬೆದರಿ ತಾವು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ವ್ಯಕ್ತಿಗಳನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತಿದ್ದೇವೆ ಎಂಬುದು ಇಸ್ರೇಲ್ ಗಮನಕ್ಕೆ ಬರಲಿ ಎಂಬ ಉದ್ದೇಶವೂ ಇರಬಹುದು.
ಇನ್ನೊಂದು ವಿಚಾರದಲ್ಲಿ ಇಸ್ರೇಲ್ ನಿಂದ ಅಪಹರಣಕ್ಕೊಳಗಾದ ಇಸ್ರೇಲ್ ಪ್ರಜೆಗಳ ಸ್ಥಿತಿ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಇಸ್ರೇಲ್ ಗೆ ಗೊತ್ತುಪಡಿಸಲೂ ಇದ್ದಿರಬಹುದು, ಯಾವುದಕ್ಕೂ ವಿಡಿಯೋ ಬಿಡುಗಡೆ ಮಾಡಿದ ಹಮಾಸ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದನ್ನೂ ಓದಿ: Chitradurga; ಬಿಜೆಪಿ ಪಕ್ಷದವರಿಗೆ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ: ಜಮೀರ್ ಅಹಮದ್ ಖಾನ್