ಗಾಜಾ ಪಟ್ಟಿ: ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಸುಮಾರು 50 ಮಂದಿ ಒತ್ತೆಯಾಳುಗಳನ್ನು ಕೊಲ್ಲಲ್ಪಟ್ಟಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಇಸ್ರೇಲ್ ರಾತ್ರೋರಾತ್ರಿ “ಉದ್ದೇಶಿತ ದಾಳಿ” ನಡೆಸಿದ ನಂತರ ಗುಂಪಿನ ಸಶಸ್ತ್ರ ಘಟಕ, ಅಲ್-ಕಸ್ಸಾಮ್ ಬ್ರಿಗೇಡ್ಸ್, ಸೇನೆಯನ್ನು ಹೊರತೆಗೆಯುವ ಮೊದಲು ಅನೇಕ ಅಡಗುತಾಣಗಳನ್ನು ನಾಶಪಡಿಸಿದೆ ಎಂದು ಹೇಳಿತು.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಏಕಾಏಕಿ ದಾಳಿ ನಡೆಸಿ ಸಾವಿರಾರು ಮಂದಿಯನ್ನು ಹತ್ಯೆಗೈದಿತ್ತು, ಅದಲ್ಲದೆ 224 ಮಂದಿಯನ್ನು ಹಮಾಸ್ ಭಯೋತ್ಪಾದಕರು ಅಪಹರಣ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹಮಾಸ್ ಭಯೋತ್ಪಾದಕರನ್ನು ಗುರಿಯಾಗಿಸಿ ಹಲವಾರು ದಾಳಿಗಳನ್ನು ಇಸ್ರೇಲ್ ನಡೆಸಿದೆ ಇದರಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು. ಇತ್ತೀಚಿನ ವರದಿ ಪ್ರಕಾರ ಇಸ್ರೇಲ್ ಗಾಜಾದಲ್ಲಿರುವ ಹಮಾಸ್ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಗುರುವಾರ ವೈಮಾನಿಕ ದಾಳಿ ನಡೆಸಿದ್ದು ಇದರಲ್ಲಿ ಹಮಾಸ್ ಉಗ್ರರು ಇಸ್ರೇಲ್ ನಿಂದ ಒತ್ತೆಯಾಗಿಸಿರಿಕೊಂಡಿದ್ದ ಸುಮಾರು ಐವತ್ತು ಮಂದಿ ಸಾವನ್ನಪ್ಪಿದ್ದಾರೆ ಎಂಬ ವಿಚಾರವನ್ನು ಬಂಡುಕೋರರು ತಮ್ಮ ಟೆಲಿಗ್ರಾಮ್ ಚಾನೆಲ್ ಮೂಲಕ ತಿಳಿಸಿದ್ದಾರೆ.
ಏತನ್ಮಧ್ಯೆ, ಗಾಜಾದಲ್ಲಿನ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯವು ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ 7,028 ಜನರ ಹೆಸರನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: War:ಅಮೆರಿಕ ಪಡೆಗಳ ಮೇಲೆ ದಾಳಿಗೆ ಪ್ರತೀಕಾರ; ಸಿರಿಯಾ ಪ್ರದೇಶದಲ್ಲಿ ಅಮೆರಿಕ ವೈಮಾನಿಕ ದಾಳಿ