Advertisement
ಈ ಸಂದರ್ಭದಲ್ಲಿ ಡಾ| ಬಿರಾದಾರ, ನಿವೃತ್ತ ಐಎಎಸ್ ಅಧಿಕಾರಿ ಡಾ| ಶಿವಾನಂದ ಜಾಮದಾರ, ಸಾಹಿತಿಗಳಾದ ಡಾ| ಕೊಪ್ಪ, ಡಾ| ಗುರುಲಿಂಗ ಕಾಪಸೆ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಶೋಧಕರಾದ ಡಾ| ವೀರಣ್ಣ ರಾಜೂರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ಜೀವಿ ಎಂಬ ಕಾವ್ಯನಾಮದಿಂದ ಕನ್ನಡ ರಸಿಕರಿಗೆ ಚಿರಪರಿಚಿತರಾಗಿರುವ ಡಾ| ಜಿ. ವಿ. ಕುಲಕರ್ಣಿ ವಿಜಾಪುರ ಜಿಲ್ಲೆಯ ಡೊಮನಾಳದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಗದಗ, ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಅನಂತರ ಮುಂಬಯಿಗೆ ಬಂದು ಶಿಕ್ಷಕ ವೃತ್ತಿಯಲ್ಲಿ ತೊಡಗಿದರು. ಕನ್ನಡ ಇನ್ನಿತರ ಪತ್ರಿಕೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಅವರಿಗೆ ವರಕವಿ ಬೇಂದ್ರೆ ಅವರ ಅಂತೇವಾಸಿಯಾಗುವ ಸುಯೋಗ ದೊರಕಿತು. ಸಾಹಿತ್ಯದ ಈ ದಿಗ್ಗಜಗಳ ಒಡನಾಟದ ಫಲವಾಗಿ ಮೂಡಿ ಬಂದ ಅಪರೂಪದ ಕೃತಿ “ನಾ ಕಂಡ ಬೇಂದ್ರೆ’ ಹಾಗೂ “ನಾ ಕಂಡ ಗೋಕಾಕ’. ಈ ಎರಡು ಗ್ರಂಥಗಳು ಅವರಿಗೆ ಮನ್ನಣೆಯನ್ನು ದೊರಕಿಸಿಕೊಟ್ಟಿವೆೆ. ಜೀವಿಯವರು ಸ್ವಭಾವತಃ ಕವಿಗಳು. ಬೇಂದ್ರೆ ಅವರ ಸಂಪರ್ಕದಿಂದಾಗಿ ಅವರ ಕಾವ್ಯಕ್ಕೆ ಹೊಸ ಆಯಾಮ ದೊರೆಯಿತು. ಇನ್ನೂ ವಿದ್ಯಾರ್ಥಿಯಾಗಿರುವಾಗಲೇ ಅವರ “ಮಧುಸಂಚಯ’ ಪ್ರಥಮ ಕವನ ಸಂಕಲನವು ಪ್ರಕಟಗೊಂಡಿತು. ಇಲ್ಲಿನ ಹೆಚ್ಚಿನ ಕವನಗಳು ನಗರದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜೀವಿಯವರು ಟೈಮ್ಸ್ ಆಫ್ ಇಂಡಿಯಾದಲ್ಲಿ ದೀರ್ಘ ವಿಮಶಾì ಲೇಖನಗಳನ್ನು ಬರೆದಿದ್ದಾರೆ.
ಗಳಿಂದ ಮುಂಬಯಿಯಲ್ಲಿ ಕನ್ನಡ ನಾಡು-ನುಡಿಯ ಸೇವೆ ಯನ್ನು ಮಾಡುತ್ತಿದ್ದಾರೆ. ಅವರಿಗೆ ಹೊರನಾಡ ಕನ್ನಡಿಗರಲ್ಲಿ ಅನನ್ಯ ಸ್ಥಾನವಿದೆ. ಪ್ರಸ್ತುತ ಅವರ ಸಾಧನೆಗೆ ಮತ್ತೂಂದು ಪ್ರಶಸ್ತಿಯ ಗರಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ.