ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಮಾವಿನಮನೆ ಆನಂತಮೂರ್ತಿ ಅವರ ಮನೆಯ ಗೋಡೌನ್‌ನಲ್ಲಿ ಇರಿಸಿದ ಸಿಪ್ಪೆ ಹಾಗೂ ಸಿಪ್ಪೆ ಸುಲಿದ ಅಡಿಕೆಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಸುಮಾರು 75 ಸಾವಿರ ರೂ. ಮೌಲ್ಯದ ಒಂದೂವರೆ ಕ್ವಿಂಟಾಲ್ ಅಡಿಕೆ ಕಳವು ಆಗಿದೆ ಎಂದು ಆನಂತಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement