Advertisement

ಹಾಲ್‌ ಆಫ್ ಫೇಮ್‌ ಟೆನಿಸ್‌: 18 ವರ್ಷದ ಮೈಕಲ್ಸೆನ್‌ ಫೈನಲ್‌ಗೆ

12:34 AM Jul 24, 2023 | Team Udayavani |

ನ್ಯೂಪೋರ್ಟ್‌: ನಾಲ್ಕು ಬಾರಿಯ ಚಾಂಪಿಯನ್‌ ಜಾನ್‌ ಇಸ್ನರ್‌ ಅವರನ್ನು ಮಣಿಸಿದ 18 ವರ್ಷದ ಅಲೆಕ್ಸ್‌ ಮೈಕಲ್ಸೆನ್‌ “ಹಾಲ್‌ ಆಫ್ ಫೇಮ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಇದೊಂದು ಆಲ್‌ ಅಮೆರಿಕನ್‌ ಸೆಮಿಫೈನಲ್‌ ಆಗಿತ್ತು. ಕೇವಲ 2ನೇ ಎಟಿಪಿ ಟೂರ್ನಿಯಲ್ಲಿ ಆಡುತ್ತಿರುವ ಅಲೆಕ್ಸ್‌ ಮೈಕಲ್ಸೆನ್‌ 7-6 (6), 6-4 ಅಂತರದಿಂದ ಜಾನ್‌ ಇಸ್ನರ್‌ ಆಟವನ್ನು ಮುಗಿಸಿದರು.

ಕಳೆದ ವಾರ ಶಿಕಾಗೊದಲ್ಲಿ ಚಾಲೆಂಜರ್‌ ಟೂರ್‌ ಇವೆಂಟ್‌ ಒಂದರಲ್ಲಿ ಚಾಂಪಿಯನ್‌ ಕೂಡ ಆಗಿದ್ದ ಮೈಕಲ್ಸೆನ್‌, 2ನೇ ಶ್ರೇಯಾಂಕದ ಫ್ರಾನ್ಸ್‌ ಆಟಗಾರ ಅಡ್ರಿಯನ್‌ ಮನ್ನಾರಿನೊ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಮನ್ನಾರಿನೊ ಕೂಡ ತಮ್ಮದೇ ದೇಶದ ಆಟಗಾರನನ್ನು ಮಣಿಸಿದ್ದು ವಿಶೇಷ. ತೃತೀಯ ಶ್ರೇಯಾಂಕಿತ ಟೆನಿಸಿಗ ಯುಗೊ ಹಂಬರ್ಟ್‌ ಅವರನ್ನು 6-4, 6-3ರಿಂದ ಪರಾಭವಗೊಳಿಸಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next