Advertisement
ಈ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಅದರಲ್ಲೂ ಸಚಿನ್ ತೆಂಡುಲ್ಕರ್ ಅಭಿಮಾನಿಗಳಲ್ಲಿ ಹುಟ್ಟಲು ಕಾರಣ ಕಳೆದ ನವೆಂಬರ್ 1 ರಂದು ‘ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಗೆ ಸಂದ ‘ಹಾಲ್ ಆಫ್ ಫೇಮ್’ ಗೌರವ. ದ್ರಾವಿಡ್ ಈ ಗೌರವಕ್ಕೆ ಪಾತ್ರವಾದ ಕೇವಲ 5 ನೇ ಕ್ರಿಕೆಟಿಗ. ಈ ಹಿಂದೆ ಸುನೀಲ್ ಗಾವಸ್ಕರ್, ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ ಮತ್ತು ಅನಿಲ್ ಕುಂಬ್ಳೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನಾರಾಗಿದ್ದರು.
ವಿಶ್ವ ಕ್ರಿಕೆಟ್ ನಶ್ರೇಷ್ಠ ಕ್ರಿಕೆಟಿಗ ಮುಂಬೈಕರ್ ಸಚಿನ್ ತೆಂಡೂಲ್ಕರ್ ಗೆ ಇದುವರೆಗೂ ಈ ಪ್ರಶಸ್ತಿ ಗೌರವ ಸಿಕ್ಕಿಲ್ಲ. ಇದೇ ಈಗ ಸಂಚಲನ ಉಂಟು ಮಾಡಿರುವ ಪ್ರಶ್ನೆ. ಐಸಿಸಿ ಕೊಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆಯಾಗಬೇಕಾದರೆ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಕನಿಷ್ಠ ಐದು ವರ್ಷ ಆಗಿರಬೇಕು. ಈ ನಡುವೆ ಆ ಆಟಗಾರ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿರಬಾರದು. ಹಾಗಾದಲ್ಲಿ ಮಾತ್ರ ಆಟಗಾರರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
Related Articles
Advertisement
ರಾಹುಲ್ ದ್ರಾವಿಡ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ದ 2012ರ ಮಾರ್ಚ್ 9 ರಂದು ಆಡಿದ್ದರು. ಅಂದರೆ ನಿವೃತ್ತಿಯಾಗಿ ಆರು ವರ್ಷಗಳಾಗಿವೆ. ಇದೇ ಕಾರಣಕ್ಕೆ ದ್ರಾವಿಡ್ ಸಚಿನ್ ಗಿಂತ ಮೊದಲು ಈ ಗೌರವಕ್ಕೆ ಪಾತ್ರಾಗಿದ್ದಾರೆ.
ರಾಹುಲ್ ದ್ರಾವಿಡ್ ಒಟ್ಟು164 ಟೆಸ್ಟ್ ಪಂದ್ಯ ಆಡಿದ್ದು 36 ಶತಕ ಮತ್ತು 63 ಅರ್ಧ ಶತಕ ಸೇರಿದಂತೆ 13288 ರನ್ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 10889 ರನ್ ಇವರ ಖಾತೆಯಲ್ಲಿದೆ. 12 ಶತಕ ಮತ್ತು 83 ಅರ್ಧಶತಕಗಳು ಏಕದಿನ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ ಬಾರಿಸಿದ್ದಾರೆ. ಸದ್ಯ ದ್ರಾವಿಡ್ ಭಾರತ ಎ ತಂಡ ಮತ್ತು ಅಂಡರ್ 19 ತಂಡಕ್ಕೆ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.