Advertisement

ಅರ್ಧ ಗಂಟೇಲಿ ಹಲ್ವಾ ರೆಡಿ!

02:36 PM Sep 20, 2017 | |

ಸ್ಪಂಜಿನಷ್ಟು ಮೆತ್ತಗಿರುವ, ಕಣಕಣದಲ್ಲೂ ಸಿಹಿಯನ್ನೇ ತುಂಬಿಕೊಂಡಿರುವ ತಿನಿಸು ಹಲ್ವಾ. ಎಲ್ಲರಿಗೂ ಹೆಚ್ಚಾಗಿ ಗೊತ್ತಿರುವುದು ಕ್ಯಾರೆಟ್‌ ಹಲ್ವಾದ ರುಚಿಯಷ್ಟೇ. ಸೇಬು, ಬಾದಾಮಿ, ಬಾಳೆ ಹಣ್ಣಿನ ಹಲ್ವಾಗಳನ್ನೂ ಮಾಡಬಹುದು. ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ತಯಾರಾಗುವ ಸ್ವಾದಿಷ್ಟ ತಿನಿಸು ಎಂಬುದು ಹಲ್ವಾಕ್ಕೆ ಇರುವ ಪ್ಲಸ್‌ ಪಾಯಿಂಟ್‌. ಇನ್ನು ತಡವೇಕೆ? ಹಲ್ವಾ ಮಾಡುವುದು ಹೇಗೆ ಎಂಬುದನ್ನು ಕಲಿ(ತಿಳಿ)ಯೋಣ ಬನ್ನಿ

Advertisement

1. ಕ್ಯಾರೆಟ್‌ ಹಲ್ವಾ:
ಬೇಕಾಗುವ ಪದಾರ್ಥಗಳು: ಕ್ಯಾರೆಟ್‌- 1/2 ಕೆ.ಜಿ., ತುಪ್ಪ- 3 ಕಪ್‌, ಮಿಲ್ಕ್ಮೇಡ್‌- 2 ಕಪ್‌, ಸಕ್ಕರೆ- 1 ಕಪ್‌, ಏಲಕ್ಕಿ ಪುಡಿ- 1 ಚಮಚ, ದ್ರಾಕ್ಷಿ ಗೋಡಂಬಿ- 3 ಚಮಚ.

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ 2 ಚಮಚ ತುಪ್ಪ ಹಾಕಿ, ಕ್ಯಾರೆಟ್‌ ತುರಿ ಹಾಕಿ ಹುರಿಯಿರಿ. ಸ್ವಲ್ಪ ನೀರು ಹಾಕಿ ಹದವಾಗಿ ಬೇಯಿಸಿ. ಇದಕ್ಕೆ ಮಿಕ್ಕ ತುಪ್ಪ, ಮಿಲ್ಕ್ಮೇಡ್‌ ಹಾಕಿ ಕೂಡಿಸಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಹಾಕಿ ಕೂಡಿಸಿ ಸಕ್ಕರೆಯ ಅಗತ್ಯ ಇದ್ದಲ್ಲಿ ಸೇರಿಸಿ ಕೂಡಿಸುತ್ತಿರಿ. ಮಿಶ್ರಣವು ತಳ ಬಿಡುತ್ತಾ ಬಂದಾಗ ಕೆಳಗಿಳಿಸಿ.

2. ಸೇಬಿನ ಹಲ್ವಾ
ಬೇಕಾಗುವ ಪದಾರ್ಥಗಳು: ಸೇಬು- 6, ತುಪ್ಪ- 1 ಕಪ್‌, ವೆನಿಲ್ಲಾ ಎಸೆನ್ಸ್‌- 1 ಚಮಚ, ಸಕ್ಕರೆ- 1 ಕಪ್‌, ಬಾದಾಮಿ- ಗೋಡಂಬಿ- ಪಿಸ್ತಾ ಚೂರುಗಳು- ತಲಾ ಅರ್ಧ ಚಮಚ.

ಮಾಡುವ ವಿಧಾನ: ಮೊದಲು  ಸೇಬಿನ ಸಿಪ್ಪೆ, ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ, ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ. ತುಪ್ಪ ಕರಗಿದ ನಂತರ ಸೇಬಿನ ಚೂರುಗಳನ್ನು ಹಾಕಿ ಮೆದುವಾಗುವವರೆಗೂ ಫ್ರೆ„ ಮಾಡಿ. ಇದಕ್ಕೆ ಒಂದು ಕಪ್‌ ನೀರು ಹಾಕಿ ಬೇಯಲು ಬಿಡಿ. ಬೆಂದ ನಂತರ ಸಕ್ಕರೆ ಹಾಕಿ ಕೂಡಿಸಿ. ಮಿಶ್ರಣ ಹೊಂದಿಕೊಂಡು ಗಟ್ಟಿಯಾದಾಗ ವೆನಿಲ್ಲಾ ಎಸೆನ್ಸ್‌ ಹಾಕಿ ಕೂಡಿಸಿ. ಮಿಶ್ರಣವು ತಳಬಿಡುತ್ತಾ ಬಂದಾಗ ಡ್ರೆ„ಫ‌ೂ›ಟ್ಸ್‌ ಚೂರುಗಳನ್ನು ಹಾಕಿ ಕೂಡಿಸಿ, ಈಗ ಪೌಷ್ಟಿಕವಾದ ಆ್ಯಪಲ್‌ ಹಲ್ವಾ ತಯಾರು.  

Advertisement

3. ಬಾದಾಮ್‌ ಹಲ್ವಾ

ಬೇಕಾಗುವ ಪದಾರ್ಥಗಳು: ಬಾದಾಮಿ- 100 ಗ್ರಾಂ, ತುಪ್ಪ- 2 ಕಪ್‌, ಸಕ್ಕರೆ- 2 ಕಪ್‌, ಏಲಕ್ಕಿ ಪುಡಿ- 1 ಚಮಚ.

ಮಾಡುವ ವಿಧಾನ: ಬಾದಾಮಿಯನ್ನು ಬಿಸಿನೀರಲ್ಲಿ ನೆನೆಸಿ ಅರ್ಧ ಗಂಟೆ ನೆನೆಸಿ, ನಂತರ ಅದರ ಸಿಪ್ಪೆ ತೆಗೆದು, ಬಾದಾಮಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ರುಬ್ಬಿದ ಬಾದಾಮಿ ಪೇಸ್ಟ್‌ ಹಾಕಿ ಕೂಡಿಸಿ. ಇದಕ್ಕೆ ಸಕ್ಕರೆ ಹಾಕಿ, ಬಾದಾಮಿ ಪೇಸ್ಟ್‌ನೊಂದಿಗೆ ಬೆರೆಯುವವರೆಗೆ ಕೂಡಿಸಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಉಳಿದ ತುಪ್ಪವನ್ನು ಸೇರಿಸಿ, ಕಲಸುತ್ತಿರಿ. ನಂತರ ಮಿಶ್ರಣ ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ರುಚಿಕರವಾದ ಬಾದಾಮ್‌ ಹಲ್ವಾ ರೆಡಿ.

4. ಬಾಳೆಹಣ್ಣಿನ ಹಲ್ವಾ

ಬೇಕಾಗುವ ಪದಾರ್ಥಗಳು: ಚಿರೋಟಿ ರವೆ- 1 ಕಪ್‌, ಬಾಳೆಹಣ್ಣು- 3, ತುಪ್ಪ- 1 ಕಪ್‌, ಸಕ್ಕರೆ-1 ಕಪ್‌, ಏಲಕ್ಕಿ ಪುಡಿ- ಸ್ವಲ್ಪ, ದ್ರಾಕ್ಷಿ$ ಗೋಡಂಬಿ- 2 ಚಮಚ.
ಮಾಡುವ ವಿಧಾನ: ರವೆಯನ್ನು ಘಮ್ಮೆನ್ನುವ ವಾಸನೆ ಬರುವವರೆಗೆ ಹುರಿದುಕೊಳ್ಳಿ. ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಹುರಿದಿಟ್ಟುಕೊಂಡ ರವೆ ಹಾಕಿ ಮತ್ತೆ ಸ್ವಲ್ಪ ಹುರಿಯಿರಿ. ಇದಕ್ಕೆ ಹೆಚ್ಚಿದ ಬಾಳೆಹಣ್ಣನ್ನು ಹಾಕಿ ಕೂಡಿಸಿ. ನಂತರ ಇದಕ್ಕೆ ಒಂದು ಕಪ್‌ ಬಿಸಿಹಾಲು ಹಾಕಿ. ದ್ರಾಕ್ಷಿ- ಗೋಡಂಬಿ ಹಾಕಿ ಸಕ್ಕರೆ ಸೇರಿಸಿ ಚೆನ್ನಾಗಿ ಕೂಡಿಸಿ. ಸಕ್ಕರೆ ಕರಗಿ ರವೆ, ಬಾಳೆಹಣ್ಣಿನ ಮಿಶ್ರಣಕ್ಕೆ ಹೊಂದಿಕೊಂಡಾಗ ಏಲಕ್ಕಿ ಪುಡಿ ಸೇರಿಸಿ, ಕೆಳಗಿಳಿಸಿ. 

ಶ್ರುತಿ ಕೆ. ಎಸ್‌., ತುರುವೇಕೆರೆ

Advertisement

Udayavani is now on Telegram. Click here to join our channel and stay updated with the latest news.

Next