Advertisement
ಗರಿಕರು, ಹಳೆಯಂಗಡಿ ಗ್ರಾಮ ಪಂಚಾ ಯತ್ ಹಾಗೂ ಸಂಘ ಸಂಸ್ಥೆ ಗಳು ಹಲವು ಬಾರಿ ಮನವಿ ನೀಡಿ, ಹೋರಾಟ ಗಳನ್ನೂ ಮಾಡಿದ್ದರು. ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲಕ್ಕೆ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಗಳು ಪತ್ರ ಬರೆದಿದ್ದು, ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿ ಸುವ ಎಲ್ಲ ವೋಲ್ವೋ ಬಸ್ಸುಗಳು ಹಳೆಯಂಗಡಿಯಲ್ಲಿ ರವಿವಾರದಿಂದಲೇ ನಿಲುಗಡೆ ಕಲ್ಪಿಸಿ, ಪ್ರಯಾಣಿಕರಿಗೆ ಸೇವೆ ನೀಡಲಿವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಒಮ್ಮತದ ಹೋರಾಟದಿಂದ ಈ ಮೊದಲು ಕಾರ್ಕಳ ಬಸ್‌ಗಳಿಗೆ ನಿಲುಗಡೆಗೆ ಅವಕಾಶ ನೀಡಿದ್ದರು. ಇದೀಗ ಸರಕಾರಿ ವೋಲ್ವೋ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಂಡಿದ್ದಾರೆ. ಮುಂದೆ ಮಣಿಪಾಲ, ಉಡುಪಿ, ಕುಂದಾಪುರ, ಭಟ್ಕಳಕ್ಕೆ ತೆರಳುವ ಎಲ್ಲ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳೂ ನಿಲುಗಡೆ ಆಗಬೇಕು. ಸರಕಾರಿ ನರ್ಮ್ ಬಸ್‌ಗಳೂ ಹಳೆಯಂಗಡಿಯತ್ತ ಸಂಚರಿಸಬೇಕು ಎಂಬ ಬೇಡಿಕೆ ಈಡೇರಿದಲ್ಲಿ ಮಾತ್ರ ನಮ್ಮ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಕ್ಕಂತಾಗುತ್ತದೆ.
Related Articles
ಅಧ್ಯಕ್ಷರು, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಹಳೆಯಂಗಡಿ
Advertisement