Advertisement

ಹಳೆಯಂಗಡಿ: ಕ್ರೀಡೆ ಸಂಘಟನೆಗೆ ಪೂರಕ: ಪಿ.ಸಿ. ಕೋಟ್ಯಾನ್‌

02:48 PM Feb 13, 2023 | Team Udayavani |

ಹಳೆಯಂಗಡಿ: ಕ್ರೀಡೆ ಯಿಂದ ಸಂಘಟನೆಗೆ ಪೂರಕವಾಗಿ ಸಂಸ್ಥೆಯನ್ನು ಬೆಳೆಸಬಹುದು, ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಮೂಲಕ ಅವರನ್ನು ಸಮಾಜ ಮುಖಿ ಚಿಂತನೆಯೊಂದಿಗೆ ಪಾಲ್ಗೊಳ್ಳಿರಿ ಎಂದು ಹಳೆಯಂಗಡಿ ಪಿ.ಸಿ.ಎ. ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಕೋಟ್ಯಾನ್‌ ಹೇಳಿದರು.

Advertisement

ತೋಕೂರು ಸರಕಾರಿ ಹಿಂದೂಸ್ತಾನಿ ಸರಕಾರಿ ಶಾಲೆಯಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ 25ರ ಒಳಗಿನ ವಯೋ ಮಿತಿಯ ಕ್ರಿಕೆಟ್‌ ಪಂದ್ಯಾಕೂಟದ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ಯನ್ನು ವಹಿಸಿ ಅವರು ಮಾತನಾಡಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇಗುಲದ ಪ್ರಧಾನ ಅರ್ಚಕ ಮಧುಸೂದನ ಆಚಾರ್ಯ ಅವರು ಕ್ರಿಕೆಟ್‌ ಪಂದ್ಯಾಟವನ್ನು ಉದ್ಘಾಟಿಸಿ, ಮಾತನಾಡಿ, ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲದಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ ಎಂದರು.

ಕ್ರಿಕೇಟ್‌ ಪಂದ್ಯಾಟವನ್ನು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಗ್ರಾಮ ಪಂಚಾಯತ್‌ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ, ಗ್ರಾಮೀಣ ಮಟ್ಟದ ಕ್ರಿಕೇಟ್‌ ಅಸೋಸಿಯೇಶನ್‌ ಇವುಗಳ ಮಾರ್ಗದರ್ಶನದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ದ್ವಿತೀಯ ವರ್ಷದ ಕ್ರಿಕೆಟ್‌ ಪಂದ್ಯಾಕೂಟ ಜರಗಿತು.

ಮೆಸ್ಕಾಂ ಇಲಾಖೆಯ ನಿವೃತ್ತ ಅಧಿಕಾರಿ ರಾಘವ ಜಿ. ಹೆಬ್ಟಾರ್‌ ತೋಕೂರು, ಉದ್ಯಮಿಗಳಾದ ಸುದರ್ಶನ್‌ ಡಿ. ಬಂಗೇರ, ದಿವಾಕರ್‌ ಬಿ. ಪದ್ಮಶಾಲಿ, ಕ್ಲಬ್‌ನ ಗೌರವಾಧ್ಯಕ್ಷ ಮೋಹನ್‌ ದಾಸ್‌, ಪಡುಪಣಂಬೂರು ಗ್ರಾ.ಪಂ.ನ ಸದಸ್ಯ ಸಂತೋಷ್‌ಕುಮಾರ್‌, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

Advertisement

ಕ್ಲಬ್‌ನ ಅಧ್ಯಕ್ಷ ಸಂತೋಷ್‌ ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್‌ ಕುಲಾಲ್‌ ವಂದಿಸಿದರು. ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ ಅವರು
ಕಾರ್ಯ ಕ್ರಮ ನಿರೂಪಿಸಿದರು. ಈ ಪಂದ್ಯಾಕೂಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next