Advertisement
ಇಂದಿರಾನಗರದ ರೈಲ್ವೇ ಗೇಟ್‌ನ ಅನಂತರ ರಕ್ತೇಶ್ವರೀ ಸ್ಥಳದವರೆಗೆ ಸಂಚಾರಕ್ಕೆ ಅನುಕೂಲವಾಗಿ ಸಂಚರಿಸಿದರೂ ಅಲ್ಲಿಂದ ಹಳೆಯಂಗಡಿ ಜಂಕ್ಷನ್‌ನವರೆಗೆ ಸಂಚರಿಸುವುದೇ ದುಸ್ತರವಾಗಿದೆ. ಇಕ್ಕಟ್ಟಾದ ರಸ್ತೆಯ ಜತೆಗೆ ಮಳೆಯ ನೀರು ರಸ್ತೆಯಲ್ಲಿಯೇ ಹರಿದಾಡುತ್ತಿದೆ. ಪಾದಚಾರಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದೇ ಸಂಚರಿಸಬೇಕಾಗಿದೆ. ವಾಹನಗಳಿಂದ ಸಿಂಪಡಣೆಯಾಗುವ ಮಳೆ ನೀರು ಮೇಲಿಗೆ ಬೀಳುತ್ತದೆ. ಒಂದು ಬಸ್ ಬಂದರೇ ಸಾಕು ಅಲ್ಲಿ ಸಂಚಾರದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ದೂರು. ಇಂದಿನ ದಿನದಲ್ಲಿ ಸ್ಥಳೀಯವಾಗಿ ವಾಹನ ದಟ್ಟಣೆಯೂ ಹೆಚ್ಚಿದ್ದು ಅದಕ್ಕೆ ತಕ್ಕಂತೆ ರಸ್ತೆಯು ವಿಸ್ತರಣೆ ನಡೆದಲ್ಲಿ ಅನೂಕೂಲ ಎನ್ನುವುದು ಸ್ಥಳೀಯರ ಅಭಿಪ್ರಾಯ.
Related Articles
Advertisement
ಹಳೆಯಂಗಡಿ-ಪಕ್ಷಿಕೆರೆ ರಸ್ತೆಯ ಅಭಿವೃದ್ಧಿಗಾಗಿ 3 ಕೋ. ರೂಗಳ ಪ್ರಸ್ತಾವವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಸರಕಾರಕ್ಕೆ ಕಳುಹಿಸಿದ್ದು ಅದು ಮಂಜೂರಾಗುವ ಹಂತದಲ್ಲಿದೆ. ರಸ್ತೆಯ ಪ್ರಗತಿಯ ಜತೆಗೆ ವಿಸ್ತರಣೆಯ ಬಗ್ಗೆ ಸೂಕ್ತವಾಗಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕ್ರಮ ಕೈಗೊಂಡು ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಈ ಬಗ್ಗೆ ಸ್ಥಳ ವೀಕ್ಷಣೆಯೂ ನಡೆಯಲಿದೆ. –ಗೋಪಾಲ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು
-ನರೇಂದ್ರ ಕೆರೆಕಾಡು