Advertisement
ಮಂಗಳವಾರ ಸಂಜೆ ಪ್ರಾರಂಭಗೊಂಡು ಬುಧವಾರ ಸಂಜೆಯವರೆಗೆ ಎರಡು ದಿನಗಳ ಕಾಲ ಜರಗುವ ಮಾರಿಪೂಜೆಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಬರುವ ಭಕ್ತಾಧಿಗಳು ಮೂರೂ ಮಾರಿಗುಡಿಗಳೂ ತೆರಳು ಮಾರಿಯಮ್ಮ ದೇವಿಗೆ ವಿವಿಧ ಹರಕೆ – ಕಾಣಿಕೆ – ಸೇವೆಗಳನ್ನು ಸಮರ್ಪಿಸುತ್ತಾರೆ. ಭಕ್ತರು ದೇವಿಯ ಗಣಗಳಿಗೆ ಸ್ವಯಂ ಪ್ರೇರಣೆಯಿಂದ ರಕ್ತಾಹಾರ ರೂಪದ ಸೇವೆಯನ್ನು ಸಮರ್ಪಿಸುವ ಮೂಲಕ ತಮ್ಮ ನಂಬಿಕೆಯನ್ನು ಅನಾವರಣಗೊಳಿಸುತ್ತಾರೆ.
Related Articles
Advertisement
ಕಾಪು ಶ್ರೀ ಹಳೇ ಮಾರಿಗುಡಿಯ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಮತ್ತು ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮೂರನೇ ಮಾರಿಗುಡಿಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಾರಿಗುಡಿಗೆ ಆಗಮಿಸುವ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಡಲಾಗಿತ್ತು
ಸುಗ್ಗಿ, ಆಟಿ, ಜಾರ್ದೆ ಮಾರಿಪೂಜೆ : ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಶ್ರೀ ಮೂರನೇ (ಕಲ್ಯ) ಮಾರಿಯಮ್ಮ ದೇವಸ್ಥಾನದ ಗದ್ದುಗೆಯಲ್ಲಿ ಅಲಂಕೃತಗೊಂಡು ಆರಾಧನೆಗೊಳ್ಳುತ್ತಿರುವ ಕಾಪುದಪ್ಪೆ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಮಾರಿಪೂಜೆ ಸೇವೆಯು ಅತೀ ದೊಡ್ಡ ಮತ್ತು ಪ್ರಧಾನ ಸೇವೆಯಾಗಿದೆ. ವಾರ್ಷಿಕವಾಗಿ ಸುಗ್ಗಿ, ಆಟಿ ಮತ್ತು ಜಾರ್ದೆ ತಿಂಗಳಲ್ಲಿ ಮೂರು ಮಾರಿಪೂಜೆಗಳು ನಡೆಯುತ್ತವೆ. ಅದರೊಂದಿಗೆ ವರ್ಷಪೂರ್ತಿ ಆಯ್ದ ದಿನಗಳಲ್ಲಿ ಭಕ್ತರು ಮಾರಿಪೂಜೆಯ ಸೇವೆಯನ್ನು ಹರಕೆಯ ರೂಪದಲ್ಲಿ ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಸಮರ್ಪಿಸುತ್ತಾರೆ.