Advertisement

ಹಾಸ್ಟೆಲ್‌ ಸಂಖ್ಯಾಬಲ ಹೆಚ್ಚಳಕ್ಕೆ ಹಾಲಪ್ಪ ಆಗ್ರಹ

02:49 PM Sep 24, 2019 | Suhan S |

ಸಾಗರ: ತಾಲೂಕಿನ ಹಾಸ್ಟೆಲ್‌ ಗಳಲ್ಲಿ ಇರುವ ಅವಕಾಶಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹಾಸ್ಟೆಲ್‌ ನೋಂದಣಿ ಬಯಸಿದ್ದು, ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸದಂತೆ ನೋಡಿಕೊಳ್ಳುವ ಅಗತ್ಯಕ್ಕಾಗಿ ಹಾಸ್ಟೆಲ್‌ಗ‌ಳ ಪ್ರವೇಶ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಲಪ್ಪ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ| ಪಿ.ಸಿ.ಜಾಫರ್‌ ಅವರನ್ನುಒತ್ತಾಯಿಸಿದರು.

Advertisement

ಬೆಂಗಳೂರಿನಲ್ಲಿ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಹಾಲಪ್ಪ, 2019-20ನೇ ಸಾಲಿನಲ್ಲಿ ಸಾಗರ ತಾಲೂಕಿನ 14 ಮೆಟ್ರಿಕ್‌ ನಂತರದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ನಿಲಯಗಳಲ್ಲಿ 860 ಸ್ಥಾನಗಳು ಮಾತ್ರ ಲಭ್ಯವಿದ್ದು, 1,236 ಅರ್ಜಿಗಳು ಸಲ್ಲಿಕೆಯಾಗಿದೆ.

ಸಾಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗಕ್ಕಾಗಿ ಬೇರೆ ಜಿಲ್ಲೆ ಹಾಗೂ ತಾಲೂಕುಗಳ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆದಿದ್ದರಿಂದ ಹಾಲಿ ಇರುವ ಹಾಸ್ಟೆಲ್‌ಗ‌ಳಲ್ಲಿ ಸ್ಥಳಾವಕಾಶ ಮಾಡಿಕೊಡಲುಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲಿ ವಸತಿ ನಿಲಯಗಳಿಗೆ ಸಂಖ್ಯಾಬಲವನ್ನು ಹೆಚ್ಚಿಸಿ ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ

ಎಪಿಎಂಸಿ ಸದಸ್ಯ ಚೇತನ್‌ರಾಜ್‌ ಕಣ್ಣೂರು, ಜಯಶೀಲ ಗೌಡ್ರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next