ಕೊಪ್ಪಳ: ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರದಲ್ಲಿ ಇಲ್ಲಿ ಹೆಸರು ಬದಲಾವಣೆಗಿಂತ ಕ್ಯಾಂಟಿನ್ ಗಳನ್ನು ಉತ್ತಮ ಪಡಿಸಬೇಕು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ, ಕೋವಿಡ್ ದಂಥಹ ಸ್ಥಿತಿ ಇರುವಾಗ ಈಗ ಹೆಸರು ಬದಲಾವಣೆಗೆ ಚರ್ಚೆ ಮಾಡಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹೆಸರು ಬದಲಾವಣೆ ಕುರಿತ ಚರ್ಚೆ ಬೇಡ ಎಂದರು.
ಆನಂದ ಸಿಂಗ್ ಸಚಿವ ಖಾತೆ ಬದಲಾವಣೆಯ ಬಗ್ಗೆ ಸಿಎಂ ನಿರ್ಧರಿಸುತ್ತಾರೆ. ಅವರು ಯಾವ ಖಾತೆ ಕೇಳಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೇಳಿದ್ದಾರೆ ಎಂಬುವುದು ಇದೇ ಮೊದಲು ಕೇಳಿದ್ದೇನೆ. ನಾನೇನು ಯಾವುದೇ ಖಾತೆಯನ್ನು ಕೇಳಿಲ್ಲ ಎಂದರು.
ಇದನ್ನೂ ಓದಿ:ಸೌದಿ ದೊರೆಯ ವಿರುದ್ಧ ಪೋಸ್ಟ್ ಪ್ರಕರಣ: ಆ.18ಕ್ಕೆ ಬೆಂಗಳೂರಿಗೆ ಬರಲಿದ್ದಾರೆ ಹರೀಶ್ ಬಂಗೇರ
ಇದೇ ವೇಳೆ ಶಾಲೆಗಳ ಆರಂಭದ ಬಗ್ಗೆ ಸರಕಾರ ತೀರ್ಮಾನ ತೆಗೆದು ಕೊಳ್ಳುತ್ತದೆ. ಸರಕಾರಿ ಶಾಲೆಯ ಮಕ್ಕಳು ಎರಡು ವರ್ಷದಿಂದ ಶಾಲೆಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಲೆ ಆರಂಭವಾಗಬೇಕು ನಮ್ಮ ಅಭಿಪ್ರಾಯ ಎಂದರು.
ಕೋವಿಡ್ 3ನೇ ಅಲೆಯನ್ನ ತಡೆಯಲು ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಒಂದು ಹಾಗು ಎರಡನೇ ಅಲೆಯಲ್ಲಿ ಆಗಿರುವ ಲೋಪಗಳನ್ನು ಈಗಾಗಲೇ ಸರಿ ಪಡಿಸಲಾಗಿದೆ. ಆಕ್ಸಿಜನ್ ಕೊರತೆ ಹಾಗು ಹಾಸಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಚಿಕಿತ್ಸೆಗೆ ವೈದ್ಯರ ನೇಮಕ, ಮೂರನೇ ಅಲೆ ತಡೆಗೆ ಬೇಕಾಗುವ ಎಲ್ಲಾ ಉಪಕರಣಗಳ ಖರೀದಿಸಿದೆ. ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ ಎಂದರು.