ಕೊಪ್ಪಳ : ರಾಜ್ಯದಲ್ಲಿ ಬಿಜೆಪಿ ಯನ್ನು ಕಟ್ಟಲು ಬಿ.ಎಸ್. ಯಡಿಯೂರಪ್ಪ ಹಗಲಿರುಳು ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ಅವರು ಚುನಾವಣೆಯಿಂದ ನಿವೃತ್ತಿ ಎಂದಿದ್ದಾರೆಯೇ ಹೊರತು ರಾಜಕೀಯದಿಂದ ನಿವೃತ್ತಿ ಎಂದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಎಸ್‌ವೈ ಕರ್ನಾಟಕದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬರುವಂತೆ ಶ್ರಮಿಸಿದ್ದಾರೆ. ಇಲ್ಲಿ ವಂಶ ಪರಂಪರೆ ನಡೆಯುತ್ತಿದೆ ಎನ್ನುವ ಮಾತಲ್ಲ.
ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದು, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾಯಕತ್ವದ ಗುಣಗಳಿರುವ ಕಾರಣಕ್ಕಾಗಿ ರಾಜ್ಯದ ಉಪಾಧ್ಯಕ್ಷ ಸ್ಥಾನ ಕೊಟ್ಟಿದೆ ಎಂದರು.
ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಗುದ್ದಾಟ ಶುರುವಾಗಿದೆ. ನಾಯಕತ್ವಕ್ಕೆ ಅವರಲ್ಲಿ ಗೊಂದಲವಿದೆ. ಆದರೆ ಬಿಜೆಪಿಯಲ್ಲಿ ಅಂತಹ ಯಾವುದೇ ಗೊಂದಲ ಇಲ್ಲ. ಹಾಗಾಗಿಯೇ ಬಿಜೆಪಿ ಡಿಫರೆಂಟ್ ಪಾರ್ಟಿ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಇದನ್ನೂ ಓದಿ : ಟಿಕೆಟ್ ಅಂತಿಮಗೊಳಿಸುವುದು ಸಂಸದೀಯ ಮಂಡಳಿ: ಸಿ.ಟಿ.ರವಿ