Advertisement

ದ್ರೋಹ ಬಗೆದ ಹಾಲಾಡಿ:ಕೈ ಟಿಕೆಟ್‌ ಆಕಾಂಕ್ಷಿ  ರಾಕೇಶ್‌ ಮಲ್ಲಿ

09:30 AM Feb 04, 2018 | Team Udayavani |

ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತನ್ನ ವಿಧಾನಸಭೆ ಸದಸ್ಯತ್ವ ಅವಧಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡುವ ಮೂಲಕ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಆರೋಪಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯಲ್ಲಿ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣದಿಂದ ಸದಸ್ಯತ್ವ ಅವಧಿ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾಗ ಕ್ಷೇತ್ರದ ಒಟ್ಟಾರೆ ಜಾತ್ಯತೀತ ಮನೋಭಾವದ ಮತದಾರರು ಅವರನ್ನು ಬೆಂಬಲಿಸಿದ ಕಾರಣ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ಮತ್ತೆ ಬಿಜೆಪಿ ಸೇರುವ ಮೂಲಕ ಜನತೆಗೆ ದ್ರೋಹ ಬಗೆದಿದ್ದಾರೆ. ಮತ್ತೂಮ್ಮೆ ಬಿಜೆಪಿ ಸೇರುವುದಿಲ್ಲ ಎಂಬ ತಮ್ಮ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ರಾಕೇಶ್‌ ಮಲ್ಲಿ ಆರೋಪಿಸಿದರು.

20 ವರ್ಷ ಹಿಂದಕ್ಕೆ

 ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ಕ್ಷೇತ್ರ ಶೇ. 5ರಷ್ಟು ಕೂಡ ಅಭಿವೃದ್ಧಿಗೊಂಡಿಲ್ಲ. ರಸ್ತೆ, ನೀರು, ಸೇತುವೆ, ಶಾಲೆ, ಆಸ್ಪತ್ರೆ, ಉದ್ಯಮ ಮೊದಲಾದವುಗಳಿಂದ ಕುಂದಾಪುರ ವಂಚಿವಾಗಿದೆ. ಅಭಿವೃದ್ಧಿಯ ಗತಿಯಲ್ಲಿ ಕಂದಾಪುರ 20 ವರ್ಷಗಳಷ್ಟು ಹಿಂದೆ ಹೋಗಿದೆ. ಶಾಸಕ ಹಾಲಾಡಿ ಅವರು ನಿಷ್ಕ್ರಿಯರಾಗಿದ್ದರು. ಸ್ವಾತಂತ್ರೊéàತ್ಸವ ಸೇರಿದಂತೆ ದೇಶದ, ರಾಜ್ಯದ ಪ್ರಮುಖ ಆಚರಣೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ ಎಂದು ರಾಕೇಶ್‌ ಆರೋಪಿಸಿದರು.

ಪಕ್ಷದ ಮುಖಂಡರಾದ ಶಂಕರ್‌ ಎ. ಕುಂದರ್‌, ಮಲ್ಲಿಕಾ ಪೂಜಾರಿ, ರೋಶನಿ ಒಲಿವೆರಾ, ರಾಘವೇಂದ್ರ, ದಿನೇಶ್‌ ಕೋಟ್ಯಾನ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ
ಇಂಟಕ್‌ ವತಿಯಿಂದ ರಾಜ್ಯದಲ್ಲಿ ಒಟ್ಟು 5 ಸೀಟುಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ನಾನು ಕುಂದಾಪುರದಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ಪಕ್ಷ ಅವಕಾಶ ಮಾಡಿಕೊಟ್ಟರೆ ಸ್ಪರ್ಧಿಸಿ ಗೆಲುವು ಸಾಧಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ಕುಂದಾಪುರದಲ್ಲಿಯೇ ಮನೆ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿದ್ದೇನೆ ಎಂದು ರಾಕೇಶ್‌ ಮಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next