Advertisement

5,375 ಕೋಟಿ ರೂ ಮೊತ್ತದಲ್ಲಿ ‘ಎಫ್‌404–ಜಿಇ–ಐಎನ್‌ 20’ ಎಂಜಿನ್‌ ಖರೀದಿಸಲಿದೆ ಎಚ್‌ಎಎಲ್‌..!

02:42 PM Aug 18, 2021 | |

ನವ ದೆಹಲಿ : ಅಮೆರಿಕದ ಜಿಇ ಏವಿಯೇಷನ್ಸ್‌ ಕಂಪನಿಯಿಂದ ‘ಎಫ್‌404–ಜಿಇ–ಐಎನ್‌20’ ಎಂಜಿನ್‌ ಖರೀದಿಗೆ ಎಚ್‌ಎಎಲ್‌ (ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌) ಸಂಸ್ಥೆಯು 5,375 ಕೋಟಿ ರೂ ಮೊತ್ತದ ಒಪ್ಪಂದ ಮಾಡಿಕೊಂಡಿದೆ.

Advertisement

‘ತೇಜಸ್’ ಲಘು ಯುದ್ಧ ವಿಮಾನಗಳಲ್ಲಿ ಈ ಎಂಜಿನ್‌ ಗಳನ್ನು ಎಚ್‌ ಎ ಎಲ್‌ ಬಳಕೆ ಮಾಡುವ ಉದ್ದೇಶದಿಂದ ಖರೀದಿಗೆ ಮುಂದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : ಸಾಧ್ಯವಿದ್ದಲ್ಲಿ ಆಫ್ ಲೈನ್ ತರಗತಿ ಆರಂಭಿಸಲು ಗೋವಾ ಸರ್ಕಾರ ಅನುಮತಿ..!

ಈ ಒಪ್ಪಂದಕ್ಕೆ  ಎಚ್‌ ಎ ಎಲ್‌ ಸಂಸ್ಥೆ ತನ್ನ ಬೆಂಗಳೂರಿನ ಕಾರ್ಪೊರೇಟ್ ಕಚೇರಿಯಲ್ಲಿ ಸಹಿ ಮಾಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಸಿಎಂಡಿ ಆರ್‌. ಮಾಧವನ್,  ‘ಲಘು ಯುದ್ಧ ವಿಮಾನಗಳಿಗೆ ಎಚ್‌ ಎ ಎಲ್‌ ಕಡೆಯಿಂದ ನಡೆದಿರುವ ಅತಿದೊಡ್ಡ ಒಪ್ಪಂದ ಇದಾಗಿದೆ ಎಂದು ತಿಳಿಸಿದೆ.

Advertisement

ಇನ್ನು, ಎಚ್‌ ಎಎ ಲ್‌ ಒಟ್ಟು 83 ಲಘು ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ  ಒದಗಿಸಲು ಒಪ್ಪಂದ ಮಾಡಿಕೊಂಡಿದ್ದು,  ಈ ಒಪ್ಪಂದವನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಎಂಜಿನ್‌ ಗಳ ಖರೀದಿಗೆ ಮುಂದಾಗಿರುವುದು ಮಹತ್ವದ್ದು ಎಂದು ಸಂಸ್ಥೆ ತಿಳಿಸಿದೆ.

ಒಟ್ಟು 99 ಎಂಜಿನ್‌ಗಳನ್ನು ಎಚ್‌ಎಎಲ್‌  ಖರೀದಿಸಲಿದ್ದು,  2029 ರೊಳಗೆ ಎಚ್‌ ಎಎಲ್‌ ಗೆ ಲಭ್ಯವಾಗಲಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ : 2022ರ ದಸರಾ ಹಬ್ಬದ ಮೊದಲೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಪೂರ್ಣ : ಪ್ರತಾಪ್ ಸಿಂಹ

Advertisement

Udayavani is now on Telegram. Click here to join our channel and stay updated with the latest news.

Next