Advertisement

ಯುದ್ಧ ವಿಮಾನದ ಗೌಪ್ಯ ಮಾಹಿತಿ ಪಾಕ್ ಗೆ ರವಾನೆ: ಮುಂಬೈ ಎಚ್ ಎಎಲ್ ಉದ್ಯೋಗಿ ಬಂಧನ

07:03 PM Oct 09, 2020 | Nagendra Trasi |

ನಾಸಿಕ್/ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿರುವ ಆರೋಪದಡಿ ಎಚ್ ಎಎಲ್ ಉದ್ಯೋಗಿಯನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿರುವ ಘಟನೆ ಶುಕ್ರವಾರ (ಅಕ್ಟೋಬರ್ 09, 2020) ನಡೆದಿದೆ.

Advertisement

ಬಿಗಿ ಭದ್ರತೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ನ ಉದ್ಯೋಗಿ ದೇಶದ ಯುದ್ಧ ವಿಮಾನಗಳ ಹಾಗೂ ನಾಸಿಕ್ ನಲ್ಲಿ ಮುಖ್ಯ ವಸ್ತುಗಳನ್ನು ಹೇಗೆ ಉತ್ಪಾದನೆ ಮಾಡಲಾಗುತ್ತದೆ ಎಂಬ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸಿರುವುದಾಗಿ ಹೆಚ್ಚುವರಿ ಡಿಜಿಪಿ ದೇವೇನ್ ಭಾರ್ತಿ ತಿಳಿಸಿದ್ದಾರೆ.

ಸಂಶಯಾಸ್ಪದ ಚಟುವಟಿಕೆ ಕುರಿತು ಭಯೋತ್ಪಾದಕ ನಿಗ್ರಹ ದಳ ಪಡೆದ ಮಾಹಿತಿ ಮೇರೆಗೆ ನಾಸಿಕ್ ನಲ್ಲಿರುವ ಎಚ್ ಎಎಲ್ ನಲ್ಲಿ ವಿಮಾನ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯನ್ನು ಬಂಧಿಸಲಾಗಿದೆ.

ಈ ವ್ಯಕ್ತಿ ಪಾಕಿಸ್ತಾನದ ಐಎಸ್ ಐಗೆ ದೇಶದ ಗೌಪ್ಯ ಮಾಹಿತಿಯನ್ನು ರವಾನಿಸಿರುವುದಾಗಿ ಮೂಲಗಳು ತಿಳಿಸಿವೆ. ಹಲವಾರು ದಿನಗಳ ಕಣ್ಗಾವಲಿನ ನಂತರ ಎಟಿಎಸ್ ಹಾಗೂ ಸೇನಾ ಗುಪ್ತಚರ ಇಲಾಖೆ ಕೊನೆಗೂ ಎಚ್ ಎಎಲ್ ಉದ್ಯೋಗಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next