Advertisement

ರಫೇಲ್‌ನಲ್ಲಿ ಎಚ್‌ಎಎಲ್‌ ಪಾಲ್ಗೊಳ್ಳುವುದಿಲ್ಲ:ಮಾಧವನ್‌

10:44 AM Nov 08, 2018 | Team Udayavani |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಎಚ್‌ಎಎಲ್‌ ಅನ್ನು ಕೈ ಬಿಟ್ಟು ರಿಲಯನ್ಸ್‌ ಡಿಫೆನ್ಸ್‌ ಕಂಪೆನಿಗೆ ಅವಕಾಶ ನೀಡಿರುವುದಕ್ಕೆ ಸಂಬಂಧಿಸಿದಂತೆ ಎದ್ದಿರುವ ಭಾರಿ ವಿವಾದದ ಮಧ್ಯೆಯೇ ನಾವು ಯಾವುದೇ ಮೂಲ ಸಲಕರಣೆ ಉತ್ಪಾದಕ ಕಂಪೆನಿಯ ಜತೆಗೆ ಪಾಲುದಾರಿಕೆ ವಹಿಸುವುದಿಲ್ಲ ಎಂದು ಎಚ್‌ಎಎಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್‌ ಮಾಧವನ್‌ ಹೇಳಿದ್ದಾರೆ. ಆದರೆ ಸಮಗ್ರ ತಂತ್ರಜ್ಞಾನ ವರ್ಗಾವಣೆ ಪಾಲುದಾರನಾಗಿ ಕಾರ್ಯನಿರ್ವಹಿಸಲು ಎಚ್‌ಎಎಲ್‌ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

Advertisement

ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಾಧವನ್‌, ಯುದ್ಧವಿಮಾನ, ಹೆಲಿಕಾಪ್ಟರು ಗಳು, ಸಂಬಂಧಿಸಿದ ಬಿಡಿಭಾಗಗಳು ಹಾಗೂ ಅವುಗಳ ರಿಪೇರಿಯೇ ಎಚ್‌ಎಎಲ್‌ನ ಮೂಲ ಉದ್ದೇಶವಾಗಿದೆ. ಬದಲಿಗೆ ಆಫ್ಸೆಟ್‌ ವಹಿವಾಟು ನಡೆಸುವುದಲ್ಲ ಎಂದು ಅವರು ಹೇಳಿದ್ದಾರೆ. ಕೆಲವು ಯೋಜನೆಗಳ ಆಫ್ಸೆಟ್‌ ವಹಿವಾಟನ್ನು ಎಚ್‌ಎಎಲ್‌ ನಡೆಸುತ್ತಿದೆ. ಆದರೆ ಅದೇ ಎಚ್‌ಎಎಲ್‌ನ ಮುಖ್ಯ ಉದ್ದೇಶವಲ್ಲ. ಯುದ್ಧ ವಿಮಾನ ನಿರ್ಮಾಣ ಹಾಗೂ ತಂತ್ರಜ್ಞಾನ ವರ್ಗಾವಣೆಯು ಸಂಪೂರ್ಣ ವಿಭಿನ್ನವಾಗಿದೆ ಎಂದು ಮಾಧವನ್‌ ಹೇಳಿದ್ದಾರೆ.

ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಕಂಪೆನಿಗೆ 30 ಸಾವಿರ ಕೋಟಿ ರೂ. ಒಪ್ಪಂದವನ್ನು ನೀಡುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ಆರೋಪಿಸುತ್ತಿದ್ದು, ಈ ಆರೋಪಗಳನ್ನು ರಫೇಲ್‌ ಯುದ್ಧ ವಿಮಾನ ತಯಾರಿಕೆ ಕಂಪೆನಿ ಡಸ್ಸಾಲ್ಟ್ ಏವಿಯೇಶನ್‌, ಕೇಂದ್ರ ಸರಕಾರ ಹಾಗೂ ರಿಲಯನ್ಸ್‌ ಸಂಸ್ಥೆಗಳು ಈಗಾಗಲೇ ಅಲ್ಲಗಳೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next