Advertisement
ಪಡುಬಿದ್ರಿ: 1975ರ ಸಮಯ. ಹೆಜಮಾಡಿಯ ಹೊಟೇಲುಗಳಿಗೆ ಇಲ್ಲಿನ ಹಾಲು ಉತ್ಪಾದಕರು ಹಾಲು ಸರಬರಾಜು ಮಾಡುತ್ತಿದ್ದರು. ಇದರಲ್ಲಿ ಹಾಲು ಉತ್ಪಾದ ಕರಿಗೆ ಆಗುತ್ತಿದ್ದ ನಷ್ಟಗಳನ್ನು ಗಮನಿಸಿದ ಊರ ಹಿರಿಯರು ಹಾಲು ಉತ್ಪಾದಕರ ಸಂಘವೊಂದನ್ನು ಸ್ಥಾಪಿಸಲು ಯೋಜಿಸಿದರು.
ಹೆಜಮಾಡಿಯಂತಹ ಪುಟ್ಟ ಊರಿನಲ್ಲಿ ಹಾಲು ಉತ್ಪಾದಕರು ದಿ| ಪುಟ್ಟಣ್ಣ ಆಚಾರ್ಯರ ನೇತೃತ್ವದಲ್ಲಿ ಸಂಘವನ್ನು ಆರಂಭಿಸಿಯೇ ಬಿಟ್ಟರು. ಇದೇ ಹೆಜಮಾಡಿ ಹಾಲು ಉತ್ಪಾದಕರ ಸಂಘ. ಈ ಸಂಘವೀಗ ನೂರಾರು ಹೈನುಗಾರರಿಗೆ ಆಸರೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ಈ 64 ಮಂದಿ ಸದಸ್ಯರು
10 ರೂ. ಸದಸ್ಯತನ ಶುಲ್ಕ ನೀಡಲೂ ಕಷ್ಟವಾಗುತ್ತಿದ್ದ ಕಾಲದಲ್ಲಿ ಸದಸ್ಯರಾಗದೆಯೂ ಹಾಲು ಹಾಕುತ್ತಿದ್ದ ಸದಸ್ಯರಿದ್ದರು. ಬಳಿಕ ಬೋನಸ್ ವಿತರಣೆಗೆ ಸದಸ್ಯತನ ಅಭಿಯಾನ ನಡೆಸಲಾಗಿತ್ತು ಈಗ 110 ಸದಸ್ಯರು ಇದ್ದು 64 ಸದಸ್ಯರು ನಿತ್ಯ ಹಾಲು ಹಾಕುತ್ತಿದ್ದಾರೆ. ನಿತ್ಯ 430 ಲೀ. ಹಾಲು ಸಂಗ್ರಹವಾಗುತ್ತಿದೆ. ವಾರ್ಷಿಕ 2.64ಕೋಟಿ ರೂ. ವಹಿವಾಟನ್ನೂ ಈ ಸಂಘ ನಡೆಸುತ್ತಿದೆ.
Related Articles
ಹೈನುಗಾರರಿಗೆ ಶೇ.15ರಷ್ಟು ಡಿವಿಡೆಂಡ್, ಬೋನಸ್ ವಿತರಿಸಲಾಗುತ್ತಿದೆ. ಸದಸ್ಯರು ಮೃತರಾದಲ್ಲಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪರಿಹಾರ ಧನ, ಆರೋಗ್ಯ ಸಮಸ್ಯೆಗಳು ಎದುರಾದಲ್ಲೂ ಪರಿಃಆರ ವಿತರಣೆ, ರಾಸುಗಳುಮರಣ ಹೊಂದಿದಲ್ಲೂ ಪರಿಹಾರಧನ ಸೇರಿದಂತೆ ಒಕ್ಕೂಟ ಮೂಲಕ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಶೇ.3 ಬಡ್ಡಿದರದೊಂದಿಗೆ ಪಡುಬಿದ್ರಿ ವ್ಯ.ಸೇ. ಸ. ಸಂಘದಿಂದ ರಾಸು ಖರೀದಿಗೆ, ಹಟ್ಟಿ ನಿರ್ಮಿಸಲು ಸಾಲ ಒದಗಿಸಲಾಗುತ್ತಿದೆ. ರಾಸುಗಳಿಗೆ 30 ಸಾವಿರ ರೂ. ಹಾಗೂ ಸದಸ್ಯರಿಗೂ ವಿಮಾ ಸೌಲಭ್ಯವಿದೆ.
Advertisement
ಮಾಹಿತಿಸಹಕಾರಿ ಸಪ್ತಾಹ ಆಚರಣೆ, ಬಂಜೆತನ ನಿವಾರಣಾ ಶಿಬಿರ, ಕಾಲುಬಾಯಿ ಲಸಿಕಾ ಶಿಬಿರ, ಶುದ್ಧಹಾಲು ಉತ್ಪಾದನೆ ಮಾಹಿತಿ ಕಾರ್ಯಾಗಾರ, ಪಶು ಸಂಗೋಪನ ಇಲಾಖೆ ಜಂಟಿ ಆಶ್ರಯದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ಶಿಬಿರಗಳನ್ನು ಸಂಘವು ಆಯೋಜಿಸುತ್ತಿದೆ. ಅತೀ ಹೆಚ್ಚು ಹಾಲು ಹಾಕುವ ಸದಸ್ಯರಿಗೆ ಬಹುಮಾನ, ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಮೂಲ್ಕಿ ವಿಜಯಾ ಕಾಲೆಜು ಎನ್‌ಎಸ್‌ಎಸ್ ಕ್ಯಾಂಪಿಗೆ ಉಚಿತ ಹಾಲನ್ನು ನೀಡಲಾಗಿದೆ. ಸ್ಥಳೀಯರಾದ ರಂಜಿತ್ ಕುಮಾರ್‌ಶೆಟ್ಟಿ, ಮಂಜುನಾಥ ಕೊಡ್ಲ, ಶಾರದಾ ಬಾೖ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಎಚ್. ಪುಟ್ಟಣ್ಣ ಆಚಾರ್ಯರು ಸ್ಥಾಪಕ ಅಧ್ಯಕ್ಷರಾಗಿ ಸುಮಾರು 100ಲೀಟರ್ ಹಾಲನ್ನು ಸಂಗ್ರಹಿಸಿ ಹೆಜಮಾಡಿಯ ಒಂದೆರಡು ಹೊಟೇಲುಗಳಿಗೆ ವಿತರಿಸಿ ಮಿಗತೆ ಹಾಲನ್ನು ಮೊಸರು ಮಾಡಿ ಹಳ್ಳಿಯ ಹೊಟೇಲ್‌ಗಳಿಗೆ ನೀಡುತ್ತಿದ್ದರು. ಬಳಿಕ ಕೆಮುಲ್ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದು 1988ರಲ್ಲಿ ದ.ಕ. ಹಾಲು ಒಕ್ಕೂಟದೊಂದಿಗೆ ಸೇರ್ಪಡೆಗೊಂಡಿತು. 1996- 97ರಲ್ಲಿ ಸ್ವಂತ ಕಟ್ಟಡ
ಹಾಲು ಉತ್ಪಾದಕರ ನಷ್ಟ ತಗ್ಗಿಸುವ ಸಲುವಾಗಿ ದಿ| ಪುಟ್ಟಣ್ಣ ಆಚಾರ್ಯರ ನೇತೃತ್ವದಲ್ಲಿ ನವೆಂಬರ್ 5, 1995ರಂದು ಹಾಲು ಉತ್ಪಾದಕರ ಸ.ಸಂಘ ಸ್ಥಾಪಿಸಿ 1996-97ರಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಅದರಲ್ಲಿ ಕಾರ್ಯಾಚರಿಸುತ್ತಿದೆ. ಶುದ್ಧ ಹಾಲಿನ ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಹಾಲನ್ನು ಮರಳಿಸಲಾಗುತ್ತಿದೆ.
ಸಂಘ ಬಾಡಿಗೆ ವಹಿವಾಟುಗಳಿಂದಲೂ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ.
ಶಿವರಾಮ ಶೆಟ್ಟಿ,
ಅಧ್ಯಕ್ಷರು ಅಧ್ಯಕ್ಷರು
ಎಚ್. ಪುಟ್ಟಣ್ಣ ಆಚಾರ್ಯ, ಎಚ್. ಶೀನ, ಗಣೇಶ್ ಹೆಜಮಾಡಿ, ಎಚ್. ರಾಮಕೃಷ್ಣ ಶೆಟ್ಟಿ, ಎಚ್. ದಿನೇಶ್, ಎಚ್. ಆನಂದ ಶೆಟ್ಟಿ, ಎಚ್. ಶಿವರಾಮ ಶೆಟ್ಟಿ (ಹಾಲಿ)
ಕಾರ್ಯದರ್ಶಿ
ಹರಿಶ್ಚಂದ್ರ ಹೆಜಮಾಡಿ, ಕೃಷ್ಣ ಹೆಜಮಾಡಿ ಹಾಗೂ ಶ್ರೀಮತಿ ಕುಶಲಾ (ಹಾಲಿ) -ಆರಾಮ