Advertisement

ಹೇರ್‌ ಶೋ!

12:30 AM Feb 27, 2019 | |

ಈಗಿನ ಹುಡ್ಗಿರ ತಲೆಕೂದಲು ಏನಿದ್ರೂ, ಭುಜದಿಂದ ಕೆಳಗಿಳಿಯೋದಿಲ್ಲ. ಹಾಗೆ ಇಳಿಯೋದಿಕ್ಕೂ ಬಿಡೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ಸಮಾಚಾರ. ಆದರೆ, ಇಲ್ಲೊಬ್ಬಳು ಗುಜರಾತಿ ಹುಡುಗಿಯ ಕೇಶರಾಶಿ ನೋಡಿದ್ರೆ, ಯಾರಿಗೂ ಹೊಟ್ಟೆಕಿಚ್ಚಾಗಬಹುದು. 16 ವರುಷದ ನೀಲಾಂಶಿ ಪಟೇಲ್‌ ಇರೋದು 5 ಅಡಿ ಉದ್ದ ಮಾತ್ರವೇ. ಆದರೆ, ಈಕೆಯ ತಲೆಕೂದಲು ಇರೋದು 5.7 ಅಡಿ ಉದ್ದ! 
ಈಕೆ ಹೀಗೆ ಕೂದಲನ್ನು ಉದ್ದ ಬಿಡೋದಿಕ್ಕೂ ಕಾರಣ ಉಂಟು. ನಿಲಾಂಶಿ ಕೊನೆಯ ಬಾರಿ ಹೇರ್‌ ಕಟ್‌ ಮಾಡಿಸಿದ್ದೇ, 6ನೇ ವಯಸ್ಸಿನಲ್ಲಂತೆ. ಕ್ಷೌರಿಕ ಈಕೆಯ ಇಷ್ಟದ ವಿರುದ್ಧವಾಗಿ ಕಟಿಂಗ್‌ ಮಾಡಿಸಿದ್ದಾಗ, ಇವಳಿಗೆ ಕೋಪ ಬಂದು, “ಇನ್ನಾವತ್ತೂ ಕಟಿಂಗ್‌ ಮಾಡಿಸೋದೇ ಇಲ್ಲ’ ಎಂದು ಸಂಕಲ್ಪ ತೊಟ್ಟಳಂತೆ. ಅದರ ಎಫೆಕ್ಟೇ ಈಗ ಈಕೆಯ ಕೂದಲನ್ನು ಗಿನ್ನೆಸ್‌ ಪುಟಕ್ಕೆ ಸೇರುವಂತೆ ಮಾಡಿದೆ. ಸಿಟ್ಟಂದ್ರೆ ಹಿಂಗಿರ್ಬೇಕಪ್ಪಾ…
 

Advertisement
Advertisement

Udayavani is now on Telegram. Click here to join our channel and stay updated with the latest news.

Next