Advertisement

ಡೆನ್ಮಾರ್ಕ್‌ ಸಲೂನ್‌, ಟ್ಯಾಟೋ ಅಂಗಡಿಗಳೂ ತೆರೆದವು

02:50 PM Apr 21, 2020 | sudhir |

ಡೆನ್ಮಾರ್ಕ್‌: ಸುದೀರ್ಘ‌ 5 ವಾರಗಳ ಅನಂತರ ಡೆನ್ಮಾರ್ಕ್‌ ದೇಶ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಹಂತ ಹಂತವಾಗಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಸೋಮವಾರ ದೇಶದ ಸಲೂನ್‌ಗಳು, ಟ್ಯಾಟೋ ಅಂಗಡಿಗಳು, ವಾಹನ ಚಾ‌ಲನೆ ತರಬೇತಿ ಕೇಂದ್ರಗಳು ತೆರವುಗೊಂಡಿದ್ದು, ತಿಂಗಳಿಂದ ಬಂದ್‌ ಆಗಿದ್ದ ಸೆಲೂನ್‌ಗಳತ್ತ ಗ್ರಾಹಕರು ಧಾವಿಸಿದ್ದಾರೆ.

ಇತ್ತೀಚೆಗೆ ಸಲೂನ್‌ ಮಾಲಕನಿಗೆ ಕರೆ ಮಾಡುವ ಮೂಲಕ ಕೌÒರಕ್ಕಾಗಿ ಆಪಾಯಿಂಟ್‌ಮೆಂಟ್‌ ತೆಗೆದುಕೊಳ್ಳುತ್ತಿರುವ ವಿಡೀಯೋ ಸಾಮಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈಗ ಅಂತಹದೇ ಒಂದು ಘಟನೆ ಡೆನ್‌ಮಾರ್ಕ್‌ ಅಲ್ಲಿ ನಡೆದಿದೆ.

ಲಾಕ್‌ಡೌನ್‌ ಮುಗಿದ ಕೂಡಲೇ ಸಲೂನ್‌ಗೆ ತೆರಳಬೇಕೆಂದು ವಾರಗಳ ಹಿಂದೆಯೇ ಮುಗಂಡ ಟಿಕೆಟ್‌ ಕಾಯ್ದಿರಿಸಿದ ಗ್ರಾಹಕ ಸೋಮವಾರ ಬೆಳಗ್ಗೆಯೇ ಕೂಪನ್‌ ಹಿಡಿದು ಸಲೂನ್‌ಗೆ ಹೋದ. ಅಷ್ಟೊತ್ತಿಗೇ ಸಲೂನ್‌ನ ಮುಂದೆ ಹಲವಾರು ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಸರಕಾರವೂ ಅಂಗಡಿಯ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್‌ ಇಡಬೇಕು. ಪ್ರತಿ ವಸ್ತುಗಳನ್ನು ಒಮ್ಮೆ ಮಾತ್ರ ಬಳಸಬೇಕೆಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next