ನಮ್ಮ ಇಂದಿನ ಜೀವನಶೈಲಿಗೆ ಅನುಗುಣವಾಗಿ ನಮ್ಮ ಆರೋಗ್ಯ ಇರುತ್ತದೆ. ಈಗಿನ ಕಾಲದಲ್ಲಿ ಆಹಾರ ಕ್ರಮದಿಂದ ಆರೋಗ್ಯದಲ್ಲಿ ಬದಲಾವಣೆಯಾಗುವುದು ಸಹಜ. ಪ್ರಸ್ತುತ ಆರೋಗ್ಯ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಕೂಡಾ ಒಂದು.
ಮಹಿಳೆಯರು ಹಾಗೂ ಪುರುಷರು ಇಬ್ಬರಲ್ಲೂ ಕಂಡುಬರುವಂತಹ ಸಮಸ್ಯೆ ಇದು. ನಮ್ಮಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಂಡು ಬರಲು ಹಲವಾರು ರೀತಿಯ ಕಾರಣಗಳು ಇರಬಹುದು. ಇದರಲ್ಲಿ ಭಾವನಾತ್ಮಕ ಅಥವಾ ದೈಹಿಕ ಒತ್ತಡ, ಹೊಸ ಔಷಧಿ ಸೇವನೆ, ಕೂದಲಿನ ಕೆಟ್ಟ ಆರೋಗ್ಯ, ಸ್ವಯಂ ರಕ್ಷಿತ ರೋಗ, ಪೋಷಕಾಂಶಗಳ ಕೊರತೆ, ಜ್ವರ ಅಥವಾ ಅನಾರೋಗ್ಯ ಇತ್ಯಾದಿ.
ಅತಿಯಾದ ರಾಸಾಯನಿಕಗಳಿಂದ ಕೂದಲಿಗೆ ಮತ್ತಷ್ಟು ಹಾನಿ ಆಗುವುದು. ಆದರೆ ಕೆಲವೊಂದು ಮನೆಮದ್ದುಗಳು ತುಂಬಾ ಸುಲಭವಾಗಿ ಕೂದಲು ಉದುರುವಿಕೆ, ತುಂಡಾಗುವುದು ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡುವುದು.
ನಾವು ಕೂದಲಿಗೆ ಬಳಸುವ ರಾಸಾಯನಿಕ ಶಾಂಪೂ, ಕಂಡೀಷನರ್ ಇತ್ಯಾದಿಗಳಿಂದಲೂ ಕೂದಲಿಗೆ ಮತ್ತಷ್ಟು ಹಾನಿಯಾಗುತ್ತದೆ. ಕೆಲ ಮನೆಮದ್ದುಗಳು ತುಂಬಾ ಸುಲಭವಾಗಿ ಕೂದಲು ಉದುರುವಿಕೆ, ತುಂಡಾಗುವುದು ಮತ್ತು ತಲೆಹೊಟ್ಟನ್ನು ನಿವಾರಣೆಗೆ ಸಹಕಾರಿಯಾಗಿದೆ. ಅದು ಯಾವುದೆಂಬ ಮಾಹಿತಿ ಇಲ್ಲಿವೆ..ನೋಡಿ..
Related Articles
ದಾಸವಾಳ ಮತ್ತು ಕೊಬ್ಬರಿ ಎಣ್ಣೆ:
ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು.
ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ:
ಎಲ್ಲರಿಗೂ ತಿಳಿದಿರುವಂತೆ ಮೆಹಂದಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ಮನೆಮದ್ದು. ಕೂದಲು ಬಿಳಿಯಾಗಿರುವವರು ಕೂದಲು ಬಣ್ಣಕ್ಕಾಗಿ ಮೆಹಂದಿ ಬಳಸ್ತಾರೆ.
ಮೆಹಂದಿ ಪುಡಿಯೊಂದಿಗೆ ಹುಳಿಮಜ್ಜಿಗೆ ಸೇರಿಸಿ ತಲೆಗೆ ಹಚ್ಚಿಕೊಂಡರೆ ಕೂದಲು ಮತ್ತಷ್ಟು ಅತ್ಯುತ್ತಮಗೊಳ್ಳಲು ಸಹಕಾರಿಯಾಗಿರುತ್ತೆ. ಕೂದಲು ಉದುರುವ ಸಮಸ್ಯೆ ಮತ್ತು ಕೂದಲಿನ ಬಣ್ಣಕ್ಕಾಗಿ, ತಲೆಹೊಟ್ಟನ್ನು ನಿವಾರಿಸಲು ಉಪಯೋಗವಾಗಲಿದೆ.
ಮೆಂತೆ-ಬೇವು:
ತಲೆಹೊಟ್ಟಿನ ಸಮಸ್ಯೆಗೆ ಇದು ಅತ್ಯುತ್ತಮ. ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಕೆಲವು ಹನಿ ನೀರು ಹಾಕಿ ಸರಿಯಾಗಿ ಪೇಸ್ಟ್ ತಯಾರಿಸಿ. ಪೇಸ್ಟ್ ಮೃದುವಾದ ಬಳಿಕ ಅದಕ್ಕೆ ನಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ. ಎಣ್ಣೆಯಂಶವಿರುವ ಕೂದಲಿಗೆ ಇದನ್ನು ಹಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
ಬಿಳಿಕೂದಲ ಸಮಸ್ಯೆಗೆ:
ಸುಮಾರು ನಾಲ್ಕರಿಂದ ಐದು ಚಮಚ ತೆಂಗಿನ ಎಣ್ಣೆಗೆ ಒಂದು ಹಿಡಿ ಕರಿಬೇವಿನ ಎಲೆಯನ್ನು ಸೇರಿಸಿ. ಮೀಡಿಯಮ್ ಉರಿಯಲ್ಲಿ ಇಟ್ಟು ಚೆನ್ನಾಗಿ ಕುದಿಸಿ, ನಂತರ ತಣ್ಣಗಾಗಲು ಬಿಡಿ. ತಣ್ಣಗಾದ ಎಣ್ಣೆಯನ್ನು ನಿತ್ಯವೂ ಕೂದಲಿಗೆ ಹಚ್ಚುವುದರಿಂದ ಸಹಕಾರಿ. ತಲೆ ಸ್ನಾನ ಮಾಡುವ ಮುನ್ನ ಈ ಎಣ್ಣೆಗೆ ಮೊಸರು ಅಥವಾ ಮಜ್ಜಿಗೆಯನ್ನು ಮಿಶ್ರಣ ಮಾಡಿ, ತಲೆಗೆ ಹಚ್ಚಿದರೆ ಕೂದಲು ಹೊಳಪು, ಕಪ್ಪು ಬಣ್ಣವನ್ನು ಪಡೆದುಕೊಳ್ಳಲು ಉಪಯೋಗವಾಗುತ್ತದೆ.
ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿಕೊಳ್ಳಿ. ಕೂದಲ ಆರೋಗ್ಯದ ಕಡೆಗೂ ಗಮನ ಹರಿಸಿ.
-ಕಾವ್ಯಶ್ರೀ