Advertisement

ನೂರಾರು ಮಕ್ಕಳ ಜೀವ ಉಳಿಸಿದ ಡಾಕ್ಟರ್‌ ಖಫೀಲ್‌ ಎತ್ತಂಗಡಿ!

08:21 PM Aug 13, 2017 | Team Udayavani |

ಲಕ್ನೋ: ಗೋರಖ್‌ಪುರ ಬಿ.ಆರ್‌.ಡಿ. ವೈದ್ಯಕೀಯ ಕಾಲೇಜಿನ ‘ಮಿದುಳಿನ ಉರಿಯೂತ’ ವಾರ್ಡ್‌ ಮುಖ್ಯಸ್ಥರಾಗಿದ್ದ ಹಾಗೂ ಎರಡು ದಿನಗಳ ಹಿಂದೆ ಆಮ್ಲಜನಕ ಪೂರೈಕೆ ಕೊರತೆ ಉದ್ಭವಿಸಿದ್ದ ಸಂದರ್ಭದಲ್ಲಿ ಬಾಹ್ಯ ಮೂಲಗಳಿಂದ ಆಮ್ಲಜನಕ ಪೂರೈಕೆ ಮಾಡುವ ಮೂಲಕ ನೂರಾರು ಮಕ್ಕಳ ಪ್ರಾಣ ಉಳಿಯಲು ಕಾರಣವಾಗಿದ್ದ ಡಾ. ಖಫೀಲ್‌ ಖಾನ್‌ ಅವರನ್ನು ಭಾನುವಾರದಂದು ಇದ್ದಕ್ಕಿದ್ದಂತೆ ಎತ್ತಂಗಡಿ ಮಾಡಲಾಗಿದೆ. ಇದೀಗ ಖಾನ್‌ ಅವರ ಜಾಗದಲ್ಲಿ ಡಾ. ಭೂಪೇಂದ್ರ ಶರ್ಮಾ ಅವರನ್ನು ಬಿ.ಆರ್‌.ಡಿ. ವೈದ್ಯಕೀಯ ಕಾಲೇಜಿನ ನೋಡಲ್‌ ಆಫೀಸರ್‌ ಆಗಿ ನೇಮಿಸಲಾಗಿದೆ ಎಂದು ಎ.ಎನ್‌.ಐ. ಸುದ್ದಿಸಂಸ್ಥೆ ವರದಿ ಮಾಡಿದೆ. ಡಾಕ್ಟರ್‌ ಖಾನ್‌ ಅವರ ಎತ್ತಂಗಡಿಗೆ ಯಾವುದೇ ಅಧಿಕೃತ ಕಾರಣಗಳನ್ನು ನೀಡಲಾಗಿಲ್ಲ.

Advertisement

ಘಟನೆ ನಡೆದಿದ್ದ ದಿನದಂದು ಖಾನ್‌ ಅವರು ಸಮಯೋಚಿತವಾಗಿ ವರ್ತಿಸದೇ ಹೋಗಿದ್ದಲ್ಲಿ ಇನ್ನಷ್ಟು ಮಕ್ಕಳು ಮರಣ ಹೊಂದುವ ಅಪಾಯವಿತ್ತು. ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕೊರತೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಡಾ. ಖಾನ್‌ ಅವರು ತಮ್ಮ ಗೆಳೆಯರ ಖಾಸಗಿ ಆಸ್ಪತ್ರೆಯಿಂದ ಆಮ್ಲಜನ ಸಿಲಿಂಡರ್‌ ಗಳನ್ನು ತುರ್ತಾಗಿ ತರಿಸಿಕೊಂಡಿದ್ದರು, ಮಾತ್ರವಲ್ಲದೆ ಶಿಶುಗಳ ಜೀವ ಉಳಿಸುವ ನಿಟ್ಟಿನಲ್ಲಿ ಅಗತ್ಯ ಆಮ್ಲಜನಕ ಸಿಲಿಂಡರ್‌ ಗಳನ್ನು ಆಸು-ಪಾಸಿನ ಇತರೇ ಆಸ್ಪತ್ರೆಗಳಿಂತ ತರಿಸಿಕೊಳ್ಳುವಲ್ಲಿ ವಿಶೇಷ ಮುತುವರ್ಜಿಯನ್ನು ವಹಿಸಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥೆಗಾಗಿ ಆಸ್ಪತ್ರೆಯಿಂದ ಹೊರಹೋಗುವ ಮುನ್ನ ಡಾ. ಖಾನ್‌ ಅವರು, ಒಂದುವೇಳೆ ಆಮ್ಲಜನಕ ಪೂರೈಕೆ ಇಳಿಮುಖವಾದಲ್ಲಿ ‘ಆ್ಯಂಬು ಬ್ಯಾಗ್‌’ಗಳನ್ನು ಪಂಪ್‌ ಮಾಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದರು ಅನ್ನುವ ಅಂಶವೂ ಇದೀಗ ಬಹಿರಂಗಗೊಂಡಿದೆ. ಮತ್ತು ಆಮ್ಲಜನಕ ಪೂರೈಕೆದಾರರಿಗೆ ಖಾನ್‌ ಅವರೇ ಹಣವನ್ನು ಪಾವತಿ ಮಾಡಿದ್ದರು ಎಂಬ ಕುತೂಹಲಕಾರಿ ಅಂಶವನ್ನು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next