Advertisement

ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ: ಭೀಮಾನಾಯ್ಕ

07:05 PM May 23, 2020 | Naveen |

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ 3.5 ಕೋಟಿ ರೂ. ಮೊತ್ತದ ಮೆಟ್ರಿಕ್‌ಪೂರ್ವ ಪರಿಶಿಷ್ಟ ಪಂಗಡದ ಬಾಲಕಿಯರ ಹಾಸ್ಟೆಲ್‌ ಕಾಮಗಾರಿಯನ್ನು ಶಾಸಕ ಭೀಮಾನಾಯ್ಕ ವೀಕ್ಷಿಸಿದರು.

Advertisement

ನಂತರ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ತೆಲುಗೋಳಿ, ಉಪನಾಯಕನಹಳ್ಳಿ, ಪಟ್ಟಣದ ಕ್ಯಾತಯನಮರಡಿ ರಸ್ತೆಯಲ್ಲಿ ಬೃಹತ್‌ ಹಾಸ್ಟೆಲ್‌ಗ‌ಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ 400 ಕೋಟಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಲಾಗಿದೆ. ಕ್ಷೇತ್ರದಲ್ಲಿ ನೀರಾವರಿ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಕೆ. ನಾಗಮ್ಮ, ಜಿಪಂ ಮಾಜಿ ಸದಸ್ಯ ಹೆಗ್ಡಾಳ್‌ ರಾಮಣ್ಣ, ಹುಡೇದ ಗುರುಬಸವರಾಜ, ಗುತ್ತಿಗೆದಾರ ಉಮಾಪತಿ, ಅಲ್ಲಾಭಕ್ಷಿ, ಡಿಶ್‌ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ| ದಿನೇಶ್‌, ಹಾಲ್ದಾಳ್‌ ವಿಜಯಕುಮಾರ, ಹೆಚ್‌.ಎಂ.ನೂರಿ, ತುರಾಯಿನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next