ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಡು ಬಡವರಿಗೆ ಯಾರೇ ಆಹಾರದ ಕಿಟ್ ವಿತರಿಸಿದರೂ ಸ್ವಾಗತಾರ್ಹ. ಇನ್ನು ಜಿಲ್ಲಾಧಿಕಾರಿ ಮಾಜಿ ಶಾಸಕರ ಮಾತು ಕೇಳಿ ಟನಲ್‌ಗಳನ್ನು ಬಂದ್ ಮಾಡಿಸಿರುವುದು ಬೇಸರ ತರಿಸಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.
ಹಳೇ ಹಗರಿಬೊಮ್ಮನಹಳ್ಳಿಯಲ್ಲಿ ಭೀಮಸೇವೆ ಆಹಾರ ಕಿಟ್ ವಿತರಿಸಿದ ನಂತರ ಅವರು ಮಾತನಾಡಿದರು. ಕೋವಿಡ್ ವೈರಸ್ ತಡೆಯುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ಟನಲ್ ಗಳನ್ನು ಕ್ಷೇತ್ರದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಜಿಲ್ಲಾಧಿಕಾರಿ ಮಾಜಿ ಶಾಸಕರ ಮಾತು ಕೇಳಿ ಟನಲ್ ಗಳನ್ನು ಬಂದ್ ಮಾಡಿಸಿರುವುದು ಬೇಸರ ತರಿಸಿದೆ. ವೈದ್ಯರ ಸಲಹೆ ಮೇರೆಗೆ ಟನಲ್ ಪ್ರಾರಂಭಿಸಲಾಗಿದೆ. ಜಿಲ್ಲಾಧಿಕಾರಿಗಳು ಟನಲ್‌ಗಳನ್ನು ಯಾಕೆ ಬಂದ್ ಮಾಡಿಸಿದ್ದಾರೆ ಎಂಬುದರ ಸ್ಪಷ್ಟೀಕರಣ ನೀಡಬೇಕು ಎಂದರು.
ಬಿಜೆಪಿ ಶಾಸಕರೇ ಅವರವರ ಕ್ಷೇತ್ರದಲ್ಲಿ ಟನಲ್‌ಗಳನ್ನು ಮಾಡಿರುವುದನ್ನು ಮಾಜಿ ಶಾಸಕರು ತಿಳಿದುಕೊಳ್ಳಬೇಕು. ಟೀಕೆಯಲ್ಲಿ ಕಾಲಹರಣ ಮಾಡುತ್ತಿರುವ ಮಾಜಿ ಶಾಸಕರು ಕ್ಷೇತ್ರದ ಜನತೆಗೆ ನೆರವು ನೀಡಲು ಮುಂದಾಗಬೇಕು. ಕ್ಷೇತ್ರದ ಎಲ್ಲೆಡೆ ಕಾಂಗ್ರೆಸ್ ಮುಖಂಡರು ಆಹಾರದ ಕಿಟ್ ವಿತರಿಸುತ್ತಿದ್ದಾರೆ. ಬಿಜೆಪಿಯವರು ಬಡವರ ಬಗ್ಗೆ ಕಾಳಜಿ ತೋರಬೇಕು. ಮುಂದಿನ ದಿನಗಳಲ್ಲಿ ದೇವಸ್ಥಾನದ ಅರ್ಚಕರಿಗೆ, ಮುಸ್ಲಿಂ ಗುರುಗಳಿಗೆ, ಪಾದ್ರಿಗಳಿಗೆ ಆಹಾರದ ಕಿಟ್ ವಿತರಿಸಲಾಗುವುದು ಎಂದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮನಾಯ್ಕ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಯಶೋದಾ ಮಂಜುನಾಥ, ಪುರಸಭೆ ಸದಸ್ಯೆ ಕವಿತಾ ಹಾಲ್ದಾಳ್, ನಿರ್ದೇಶಕ
ಹುಡೇದ್ ಗುರುಬಸವರಾಜ, ವಿಜಯಕುಮಾರ್, ಎಚ್. ಉಮಾಪತಿ, ತ್ಯಾವಣಗಿ ಕೊಟ್ರೇಶ, ಆರ್. ಕೇಶವರೆಡ್ಡಿ, ಕನ್ನಿಹಳ್ಳಿ ಚಂದ್ರಶೇಖರ, ಬಾಲಕೃಷ್ಣ ಬಾಬು, ಹೆಗ್ಡಾಳ್ ಶ್ರೀನಿವಾಸ ಇತರರಿದ್ದರು