Advertisement
ಪಟ್ಟಣದ ರಾಮನಗರದ ತೇರಿನ ಮನೆಯ ಬಳಿ ಮಾತನಾಡಿದ ಅವರು, ಫೆ. 5ರಂದು ಮಂಗಳವಾರ ವಿಳಂಬಿನಾಮ ಸಂವತ್ಸರದಲ್ಲಿ ಕಲಶ ಸ್ಥಾಪನೆ ಹಾಗೂ ಅಶ್ವೋತ್ಸವ, ದಿ. 6ರಂದು ಬುಧವಾರ ಹನುಮಂತೋತ್ಸವ, ಗುರುವಾರ ಗರುಡೋತ್ಸವ, ಶನಿವಾರ ಶ್ವೇತಗಜೋತ್ಸವ, ಫೆ.10ರಂದು ಪಂಚಮಿಯಂದು ಸಂಜೆ 5ಕ್ಕೆ ಶ್ರೀ ವೆಂಕಟೇಶ್ವರ ರಥೋತ್ಸವವು ಅದ್ಧೂರಿಯಾಗಿ ಜರುಗಲಿದೆ. ಫೆ.11ರಂದು ಸೋಮವಾರ ಕಡುಬಿನ ಕಾಳಗ, ಫೆ.12ರಂದು ಮಂಗಳವಾರ ಅವಭೃತ ಸ್ನಾನ ಹೀಗೆ 7 ದಿನಗಳ ಕಾಲ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ದಾನಿಗಳ ಕುಟುಂಬವರ್ಗದ ಮುಖ್ಯಸ್ಥರಾದ ಗಂಗಾವತಿ ವಿಜಯಕುಮಾರ್, ನಾಣಿಕೇರಿ ದೈವದ ಅಧ್ಯಕ್ಷ ಬಾರಿಕರ ಬಾಪೂಜಿ, ಹುಳ್ಳಿ ಪ್ರಕಾಶ್ ಮಾತನಾಡಿದರು.
Advertisement
10ರಂದು ಹಗರಿಬೊಮ್ಮನಹಳ್ಳಿ ವೆಂಕಟೇಶ್ವರ ರಥೋತ್ಸವ
08:00 AM Jan 30, 2019 | |
Advertisement
Udayavani is now on Telegram. Click here to join our channel and stay updated with the latest news.