Advertisement

ಐಟಿ ದಾಳಿಯಿಂದ ಪ್ರತಿಪಕ್ಷದವರನ್ನು ಹಣಿಯುವ ತಂತ್ರ

03:54 PM Apr 12, 2019 | Naveen |

ಹಗರಿಬೊಮ್ಮನಹಳ್ಳಿ: ರೈತರ ಸಾಲಮನ್ನಾ, ಬೆಂಬಲ ಬೆಲೆಯಂತಹ ಕನಿಷ್ಠ ಕ್ರಮಗಳನ್ನೂ ಕೈಗೊಳ್ಳದ ಮೋದಿ ಕೇವಲ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ. ಉಗ್ರಪ್ಪ ಹರಿಹಾಯ್ದರು.

Advertisement

ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಪ್ರಚಾರಸಭೆಯಲ್ಲಿ ಗುರುವಾರ ಅವರು ಮಾತನಾಡಿದರು. ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದು ದೇಶದ ಯೋಧರಾದರೂ ಬಿಜೆಪಿಯವರು ತಾವೇ
ಯುದ್ದ ಮಾಡಿದವರಂತೆ ಬೀಗುತ್ತಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿತಕ್ಕೆ ಪ್ರಧಾನಿ ಮೋದಿ ಕೈಗೊಂಡ ನೋಟು ಅಮಾನೀಕರಣ ಕಾರಣವಾಗಿದೆ. ಐಟಿ ರೇಡ್‌ ನಡೆಸುವ ಮೂಲಕ ಪ್ರತಿಪಕ್ಷಗಳನ್ನು ಹಣಿಯುವ ತಂತ್ರ ಅನುಸರಿಸುತ್ತಿದ್ದಾರೆ. ಜಿಲ್ಲೆಯ ಸಮಸ್ಯೆಗಳನ್ನು ಸಂಸತ್‌ನಲ್ಲಿ ಗಮನ ಸೆಳೆಯುವ, ಅಭಿವೃದ್ಧಿಗಾಗಿ ಹೋರಾಟ ನಡೆಸುವ ಸಾಮಾರ್ಥ್ಯ ಹೊಂದಿದ್ದು, ತಮ್ಮನ್ನು ಬೆಂಬಲಿಸಬೇಕು.

ಹಗರಿಬೊಮ್ಮನಹಳ್ಳಿ ರೈಲ್ವೆ ಕಾಮಗಾರಿ ಪೂರ್ಣಗೊಳಿಸದೆ ಇರುವುದಕ್ಕೆ ಹಿಂದಿನ ಬಿಜೆಪಿ ಸಂಸದರಲ್ಲಿನ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ. ಯುವಕರು ಕೇವಲ ಮೋದಿಯ ಬಗ್ಗೆ ಒಳ್ಳೆಯ ಮಾತನಾಡಿದರೆ ಸಾಲದು ಅವರ ಅಭಿವೃದ್ಧಿಯ ಬಗ್ಗೆ ಅವಲೋಕನ ಮಾಡಿಕೊಳ್ಳುವ ಮೂಲಕ
ಮತದಾನ ಮಾಡುವ ಅಗತ್ಯತೆ ಇದೆ ಎಂದರು.

ಶಾಸಕ ಎಸ್‌.ಭೀಮಾನಾಯ್ಕ ಮಾತನಾಡಿ, ತಾಲೂಕಿನ ಚಿಲವಾರು ಬಂಡೆ ಏತ ನೀರಾವರಿ ಯೋಜನೆ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ. ಪ್ರಮುಖವಾಗಿ ಈಗಾಗಲೇ ಮಾಲವಿ ಜಲಾಶಯಕ್ಕೆ ಇಂಟೇಕ್‌ ಚಾನೆಲ್‌
ನಿಂದ ಒಟ್ಟು 36 ಕಿ.ಮಿ.ನಷ್ಟು ಪೈಪ್‌ಲೈನ್‌ ಕಾಮಗಾರಿಗೆ ಒಟ್ಟು 2600 ಪೈಪ್‌ಗ್ಳ ಪೈಕಿ ಶೇ.40ರಷ್ಟು ಪೈಪ್‌ ಗಳ ಪೂರೈಕೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳು
ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರ ಬೆಂಬಲ ಸಿಗಲಿದೆ. ನೀರಾವರಿ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ನಿರ್ಲಕ್ಷé ವಹಿಸಿದ ಬಿಜೆಪಿಯವರಿಗೆ
ಲೋಕಸಭೆ ಚುನಾವಣೆಯಲ್ಲಿ ಜನರಲ್ಲಿ ಮತಕೇಳುವ ನೈತಿಕತೆ ಇಲ್ಲ. ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಉಗ್ರಪ್ಪ ಅವರಿಗೆ 40 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ನೀಡಲಾಗುವುದು ಎಂದು ತಿಳಿಸಿದರು.

ಡಿಸಿಸಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಪವಾಡಿ ಹನುಮಂತಪ್ಪ, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸೋಮಲಿಂಗಪ್ಪ, ಮಾಜಿ ಅಧ್ಯಕ್ಷರಾದ ಹೆಗ್ಡಾಳ್‌ ರಾಮಣ್ಣ, ಮುಟುಗನಹಳ್ಳಿ ಕೊಟ್ರೇಶ್‌, ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್‌, ಹುಲ್ಲೇನವರ ಭೀಮಪ್ಪ, ರೋಗಾಣಿ ಹುಲುಗಪ್ಪ, ತಾಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಕಾಂಗ್ರೆಸ್‌ ಹಿಂದುಳಿದವರ್ಗದ ಅಧ್ಯಕ್ಷ ಅಂಬಾಡಿ ನಾಗರಾಜ, ಪುರಸಭೆ ಸದಸ್ಯ ಹುಡೇದ್‌ ಗುರುಬಸವರಾಜ, ಪ್ರಚಾರ ಸಮಿತಿ ಅಧ್ಯಕ್ಷ ಡಿಶ್‌ ಮಂಜುನಾಥ, ಮುಖಂಡರಾದ ಗೆದ್ದಲಗಟ್ಟಿ ತಿಮ್ಮಣ್ಣ, ಬಾಲಕೃಷ್ಣಬಾಬು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next